ಬಾಲಿವುಡ್ ಬಾಯಿಜಾನ್ ಸಲ್ಲುಬಾಯ್ ಗೆ 53 ಪ್ಲಸ್ ಆದ್ರೂ ಕಂಕಣ ಭಾಗ್ಯ ಮಾತ್ರ ಕೂಡಿ ಬಂದಿಲ್ಲ. ಇನ್ನೂ ಮೋಸ್ಟ್ ವಾಂಟೆಡ್ ಬ್ಯಾಚುಲರ್ ಆಗಿಯೇ ಉಳಿದುಕೊಂಡಿದ್ದಾರೆ. 

ಕಾಲ್ ಶೀಟ್ ಸಿಗದಷ್ಟು ಬ್ಯುಸಿ, ಕೈತುಂಬಾ ಹಣ ಎಲ್ಲವೂ ಇದೆ. ಆದರೆ ಇದುವರೆಗೂ ಮನಮುಟ್ಟುವ, ಹೃದಯದ ಕದ ತಟ್ಟುವ ಹುಡುಗಿ ಮಾತ್ರ ಸಿಕ್ಕಿಲ್ಲ. 

ಎಲ್ಲಾ ಮರೆತೋಯ್ತು.. ಟೈಗರ್ ಜತೆ ಓಡಾಡ್ತಿದ್ದ ಬ್ಯೂಟಿಗೆ ಮೆಮೋರಿ ಲಾಸ್!

ಇತ್ತೀಚಿಗೆ ಒಂದು ಸಂದರ್ಶನದಲ್ಲಿ ಮದುವೆ ಬಗ್ಗೆ ಮಾತನಾಡಿದ್ದಾರೆ. ಭಾರತ್ ಸಿನಿಮಾದಲ್ಲಿ ಕತ್ರಿನಾ ಕೈಫ್ ಪಾತ್ರ ನನಗೆ ಪ್ರಪೋಸ್ ಮಾಡುತ್ತದೆ. ಆದರೆ ನಿಜ ಜೀವನದಲ್ಲಿ ಇದುವರೆಗೂ ಯಾರೂ ನನಗೆ ಪ್ರಪೋಸ್ ಮಾಡಿಲ್ಲ. ಯಾಕಂದರೆ ನಾನು ಕ್ಯಾಂಡಲ್ ಲೈಟ್ ಡಿನ್ನರ್ ಮಾಡಿಲ್ಲ. ಆದರೆ ಬೇಸರದ ವಿಚಾರವೆಂದರೆ ಯಾರೂ ಕೂಡಾ ನನ್ನನ್ನು ಕೇಳಿಯೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. 

ಮುಂದಿನ ವರ್ಷ ಮದುವೆಗೆ ಈಗಲೇ ಲೆಹಂಗಾ ಆರ್ಡರ್ ಮಾಡಿದ ಅಲಿಯಾ ಭಟ್

ಐಶ್ವರ್ಯಾ ರೈ, ಕತ್ರಿನಾ ಕೈಫ್ ಜೊತೆ ಸಲ್ಲು ಬಾಯ್ ಹೆಸರು ಕೇಳಿ ಬಂದಿತ್ತು. ನಂತರ ಬ್ರೇಕಪ್ ಆಗಿದ್ದೂ ಗೊತ್ತೇ ಇದೆ. ಕತ್ರಿನಾ ಬರ್ತಡೇಗೆ ವಿಶ್ ಕೂಡಾ ಮಾಡಿ ಗಮನ ಸೆಳೆದಿದ್ದರು. ಇವರ ಜೊತೆಗೆಲ್ಲಾ ಓಡಾಡಿದ ಸಲ್ಲುಬಾಯ್ ಈಗ ನನಗೆ ಇದುವರೆಗೂ ಯಾರೂ ಪ್ರಪೋಸ್ ಮಾಡಿಲ್ಲ ಎಂದಿದ್ದಾರೆ. ಹೋಗ್ಲಿ ಬಿಡಿ ಇವರೇ ಪ್ರಪೋಸ್ ಮಾಡಿರಬಹುದು ಅಂದ್ಕೊಳೋಣ!