ಅಲಿಯಾ ಭಟ್- ರಣಬೀರ್ ಕಪೂರ್ ಬಿ ಟೌನ್ ನ ಟಾಕ್ ಆಫ್ ದಿ ಲವ್ ಬರ್ಡ್ಸ್ ಗಳು. ಏನಿಲ್ಲ.. ಏನಿಲ್ಲ.. ನಮ್ಮಿಬ್ಬರ ನಡುವೆ ಏನಿಲ್ಲ ಎನ್ನುತ್ತಲೇ ಡೇಟಿಂಗ್ ನಡೆಸುತ್ತಾರೆ. ಒಟ್ಟಿಗೆ ಓಡಾಡುತ್ತಾರೆ. 2020 ಕ್ಕೆ ಮದುವೆಯನ್ನೂ ಆಗುತ್ತಾರೆ ಎಂಬ ಸುದ್ದಿ ಬಿ ಟೌನ್ ನಲ್ಲಿ ಓಡಾಡುತ್ತಿದೆ. 

ಅಲಿಯಾ ಭಟ್ ಮದುವೆಗೆಂದು ಈಗಲೇ ಲೆಹಂಗಾ ಖರೀದಿಸಿದ್ದಾರೆ. ಖ್ಯಾತ ವಿನ್ಯಾಸಗಾರ ಸವ್ಯಸಾಚಿಗೆ ಲೆಹಂಗಾ ಡಿಸೈನ್ ಮಾಡುವಂತೆ ಈಗಲೇ ಆರ್ಡರ್ ಕೊಟ್ಟಿದ್ದಾರೆ ಎನ್ನಲಾಗಿದೆ. 

ಅಲಿಯಾಗೆ ಸವ್ಯಸಾಚಿ ಡಿಸೈನ್ ವೇರ್ ಗಳೆಂದರೆ ಸಿಕ್ಕಾಪಟ್ಟೆ ಇಷ್ಟ. ಈವೆಂಟ್ ಗಳಿಗೆ, ಪಾರ್ಟಿಗಳಿಗೆ, ಫಂಕ್ಷನ್ ಗಳಿಗೆ ಅವರು ಡಿಸೈನ್ ಮಾಡಿರುವ ವೇರ್ ಗಳನ್ನೇ ಧರಿಸುತ್ತಾರೆ. ಹಾಗಾಗಿ ಮದುವೆ ಇನ್ನೂ ಒಂದು ವರ್ಷವಿದೆ ಅನ್ನುವಾಗಲೇ ಆರ್ಡರ್ ಕೊಟ್ಟಿದ್ದಾರೆ. 

ರಣವೀರ್ ಕಪೂರ್ ತಂದೆ ರಿಷಿ ಕಪೂರ್ ಭಾರತಕ್ಕೆ ಹಿಂತಿರುಗಿದ ನಂತರ ಅಲಿಯಾ - ರಣವೀರ್ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೂ ಇದೆ. ಇವರಿಬ್ಬರೂ ‘ಬ್ರಹ್ಮಸೂತ್ರ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.