Asianet Suvarna News Asianet Suvarna News

#SareeTwitter,ಸೀರೆ ತೊಟ್ಟ ನಟನ ಫೋಟೋ ವೈರಲ್!

ಟ್ಟಿಟರ್ ನಲ್ಲಿ ಧೂಳೆಬ್ಬಿಸುತ್ತಿರುವ #SareeTwitter ಅಭಿಯಾನಕ್ಕೆ ರಾಜಕಾರಣಿಗಳು ಮಾತ್ರವಲ್ಲದೇ ಬಾಲಿವುಡ್‌ ಹಾಗೂ ಸ್ಯಾಂಡಲ್‌ವುಡ್ ಮಂದಿ ಸಪೋರ್ಟ್ ಮಾಡಿದ್ದಾರೆ. ಅದರಲ್ಲೂ ಈ ನಟ ತೊಟ್ಟ ಸೀರೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. '

Bollywood actor Ayushmann Khurrana join sareetwitter and shares photo from dream girl
Author
Bangalore, First Published Jul 18, 2019, 2:36 PM IST
  • Facebook
  • Twitter
  • Whatsapp

'Article 15' ಚಿತ್ರದ ನಟ ಆಯುಷ್ಮಾನ್ ಕುರಾನ್ ಲೇಟೆಸ್ಟ್‌ ಟ್ರೆಂಡ್‌ ಆಗಿರುವ #SareeTwitter ಗೆ ನೀಲಿ ಸೀರೆ ತೊಟ್ಟ ಫೋಟೋ ಹಾಕುವ ಮೂಲಕ ಎಂಟ್ರಿ ಕೊಟ್ಟಿದ್ದಾರೆ.

#SareeTwitter ನಲ್ಲಿ ಮಿಂಚಿದ ಪ್ರಿಯಾಂಕಾ ಗಾಂಧಿ 22 ವರ್ಷ ಹಳೆ ಪೋಟೋ!

ಅಯುಷ್ಮಾನ್ ಮುಂಬರುವ ಚಿತ್ರವಾದ 'ಡ್ರೀಮ್ ಗರ್ಲ್' ಪೋಸ್ಟರ್‌ಗೆಂದು, ಜೀನ್ಸ್ ಆ್ಯಂಡ್ ವೈಟ್‌ ಟೀ ಶರ್ಟ್‌ ಧರಿಸಿ ಸ್ಕೂಟರ್ ಮೇಲೆ ಕುಳಿತಿದ್ದಾರೆ. ಈ ಜೀನ್ಸ್ ಮೇಲೆ ನೀಲಿ ಸೀರೆ ಧರಿಸಿ ಫೋಟೋ ಅಪ್ಲೋಡ್ ಮಾಡಿ '#DreamGirl ಇನ್ನು ಕೆಲವೇ ದಿನಗಳಲ್ಲಿ #Sareetwitter'ಎಂದು ಬರೆದುಕೊಂಡಿದ್ದಾರೆ.

ಈ ಅಭಿಯಾನದಲ್ಲಿ ನಟಿ ಸೋನಂ ಕಪೂರ್, ಯಾಮಿ ಗುಪ್ತ, ಪ್ರಿಯಾಂಕ ಗಾಂಧಿ ಇನ್ನಿತರ ನಟಿಯರು ಭಾಗಿಯಾಗಿದ್ದಾರೆ.

 

Follow Us:
Download App:
  • android
  • ios