ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಈ ಹಿಂದೆ ‘ಅಮೃತಧಾರೆ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅದಾದ ನಂತರ ರಮೇಶ್ ಅರವಿಂದ್ ನಿರ್ದೇಶನದ ‘ಬಟರ್ ಫ್ಲೈ’ ಸಿನಿಮಾದಲ್ಲಿ ಧ್ವನಿ ನೀಡುವ ಮೂಲಕ ಮತ್ತೆ ಬರುತ್ತಿದ್ದಾರೆ.

 

ಬಟರ್ ಫ್ಲೈ ಸಿನಿಮಾ ನಾಲ್ಕು ಭಾಷೆಗಳಲ್ಲಿ ಮೂಡಿ ಬರುತ್ತಿದ್ದು, ಕನ್ನಡದಲ್ಲಿ ಪರೋಲ್ ಯಾದವ್ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕ್ಲಬ್ ಸಾಂಗ್ ಒಂದಿದ್ದು ಅದಕ್ಕೆ ಅಮಿತಾಭ್ ಬಚ್ಚನ್ ಧ್ವನಿ ನೀಡುತ್ತಿದ್ದಾರೆ.

ಕನ್ನಡಕ್ಕೆ ಬಂತು ಕ್ವೀನ್ ಚಿತ್ರ! ಇಲ್ಲಿದೆ ಬಟರ್ ಫ್ಲೈ ಫಸ್ಟ್ ಲುಕ್

 

ಕ್ಲಬ್ ಸಾಂಗ್ ವಿಶೇಷವೆಂದರೆ ಇದನ್ನು ಕನ್ನಡ ಚಿತ್ರರಂಗದ ಹಾಗೂ ರಂಗಭೂಮಿ ಹಿರಿಯ ಕಲಾವಿದ ಮಾಸ್ಟರ್ ಹಿರಣ್ಣಯ್ಯ ಕನ್ನಡ ಹಾಗೂ ಇಂಗ್ಲೀಷ್ ನಲ್ಲಿ ಸಾಹಿತ್ಯ ಬರೆದಿದ್ದಾರೆ. ಇನ್ನು ಅಮಿತಾಭ ಬಚ್ಚನ್ ಗೆ ಜೊತೆಯಾಗಿ ವಿದ್ಯಾ ವೋಕ್ಸ್ ಹಾಡುತ್ತಿದ್ದಾರೆ.

ಕ್ಲಬ್ ಹಾಡಿನ ಶೂಟಿಂಗ್ ಗಾಗಿ ಪ್ಯಾರಿಸ್ ನಲ್ಲಿರುವ ಕ್ಲಬ್ ವೊಂದನ್ನು ನಾಲ್ಕು ದಿನಕ್ಕೆ ಬುಕ್ ಮಾಡಲಾಗಿದೆ.