ಅಕ್ಷಯ್‌ ಕುಮಾರ್‌ ಒಳ್ಳೆಯ ನಟ ಎನ್ನುವುದರಲ್ಲಿ ಎರಡು ಮಾತಿಲ್ಲ. ಎಂತಹ ಪಾತ್ರ ಕೊಟ್ಟರೂ ಅದಕ್ಕೆ ತನ್ನತನವನ್ನು ತುಂಬಿ ಚೆಂದಗಾಣಿಸುವ ಶಕ್ತಿ ಅವರಲ್ಲಿ ಇದೆ. ಆದರೂ ಅವರೊಳಗೊಂದು ಕಂಫರ್ಟ್‌ ಝೋನ್‌ ಇತ್ತು, ಅದರಿಂದ ಈಗವರು ಹೊರ ಬಂದಿದ್ದಾರೆ ಎನ್ನುವುದು ಅವರ ಪೋಸ್ಟ್‌ನಿಂದ ಗೊತ್ತಾಗಿದೆ.

ಬಿ-ಟೌನ್ ನ್ಯೂಸ್‌ ಲಿಸ್ಟ್‌ನಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಸೌಂಡ್‌ ಮಾಡುವ ಡಿಫರೆಂಟ್ ಆ್ಯಂಡ್ ಕ್ರಿಯೇಟಿವ್ ಹೀರೋ ಅಕ್ಷಯ್ ಕುಮಾರ್ ಮಂಗಳಮುಖಿಯಾಗಿ ಕಾಣಿಸಿಕೊಂಡಿರುವ ರೀತಿ ಜನರಿಗೆ ಅಚ್ಚರಿ ಮೂಡಿಸಿದೆ.

ಮೋದಿ ಮೇನಿಯಾ! ಯಾರ್ ಆಗ್ತಾರೆ ಮೋದಿ ಚಿತ್ರಕ್ಕೆ ಲೀಡ್?

ಅದು ‘ಲಕ್ಷ್ಮೇ ಬಾಂಬ್‌’ ಚಿತ್ರದ ಮೂಲಕ. ಮೊನ್ನೆಯಷ್ಟೇ ಚಿತ್ರದ ಮೊದಲ ಪೋಸ್ಟರ್‌ ಬಿಡುಗಡೆಯಾಗಿ ಸಾಕಷ್ಟುಚರ್ಚೆ ಹುಟ್ಟುಹಾಕಿದೆ. ಯಾಕೆಂದರೆ ಅದರಲ್ಲಿ ಅಕ್ಷಯ್‌ ಕುಮಾರ್‌ ಸೀರೆಯುಟ್ಟು ಕಾಳಿಯ ಮುಂದೆ ನಿಂತು ರುದ್ರಾವತಾರದ ಪೋಸ್‌ ಕೊಟ್ಟಿದ್ದಾರೆ. ಜೊತೆಗೆ ‘ನವರಾತ್ರಿಯಂದು ದೇವಿಯು ನಮಗೆ ಶಕ್ತಿ ನೀಡುತ್ತಾಳೆ. ಇದೇ ವೇಳೆ ನಾನು ನನ್ನ ಹೊಸ ಚಿತ್ರದ ಮೊದಲ ಪೋಸ್ಟರ್‌ ಅನ್ನು ಹಂಚಿಕೊಳ್ಳುತ್ತಿರುವೆ. ಇದರ ಬಗ್ಗೆ ನನಗೆ ಸಾಕಷ್ಟುಕುತೂಹಲ ಇದೆ. ಭಿನ್ನವಾಗಿ ಕಾಣಿಸಿಕೊಂಡಿದ್ದೇನೆ. ಒಂದೊಂದು ಸಲ ಕಂಫರ್ಟ್‌ ಝೋನ್‌ನಿಂದ ಹೊರ ಬಂದಾಗಲೇ ಹೊಸ ಜೀವನ ಶುರುವಾಗುವುದು ಅಲ್ಲವೇ?’ ಎಂದು ಬರೆದುಕೊಂಡಿದ್ದಾರೆ.

View post on Instagram

ಹಾಗಾಗಿ ಅಕ್ಷಯ್‌ ಅವರ ಹೊಸ ಸಿನಿಮಾ ಸಾಕಷ್ಟುಭಿನ್ನತೆ ಮತ್ತು ಹೊಸತನವನ್ನು ಹೊಂದಿರಲಿದೆ ಎಂದು ಸಲೀಸಾಗಿ ಅಂದಾಜು ಮಾಡಬಹುದು.