ಬೆಂಗಳೂರು (ಜ. 20): ಬಾಲಿವುಡ್ ನಟಿ ಸ್ವರ ಭಾಸ್ಕರ್ ಮತ್ತೆ ಸುದ್ದಿಯಾಗಿದ್ದಾರೆ. ಆರೇಳು ವರ್ಷದ ಹಿಂದೆ ನಡೆದ ಘಟನೆಯೊಂದನ್ನು ಬಹಿರಂಗಪಡಿಸುವ ಮೂಲಕ ಬಿಟೌನ್ ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದಾರೆ. 

ನಿರ್ದೇಶಕರ ಹೆಸರನ್ನು ಬಹಿರಂಗಪಡಿಸದೇ ತಾನೂ ಕೂಡಾ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದಿದ್ದಾರೆ. ಪ್ಯಾನೆಲ್ ಒಂದರಲ್ಲಿ ಚರ್ಚೆ ನಡೆಸುತ್ತಿದ್ದಾಗ ಒಬ್ಬರು ತಮ್ಮ ಅನುಭವವನ್ನು ಹೇಳಿದಾಗ 6-8 ವರ್ಷದ ಹಿಂದೆ ನನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯ ನನಗೆ ಅರ್ಥವಾಯಿತು. 

ಸಿನಿಮಾವೊಂದು ಮಾಡಬೇಕಾದರೆ ಆ ಚಿತ್ರದ ನಿರ್ದೇಶಕ ನನ್ನ ಬಳಿ ಅನುಚಿತವಾಗಿ ವರ್ತಿಸುತ್ತಿದ್ದ. ನನ್ನನ್ನು ದೈಹಿಕವಾಗಿ ಬಯಸುತ್ತಿದ್ದ. ಆದರೆ ನಾನು ಸಿಕ್ಕಿರಲಿಲ್ಲ. ಇದೀಗ ಎಲ್ಲರೂ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದಾಗ ನನಗೂ ಅರಿವಾಯಿತು ಎಂದಿದ್ದಾರೆ. 

ಇನ್ನೊಂದು ಸಿನಿಮಾ ಮಾಡುವಾಗಲೂ ಅದೇ ಅನುಭವವಾಯ್ತು. ನಾನು ನಿರೀಕ್ಷೆಯೂ ಮಾಡಿರಲಿಲ್ಲ. ನನ್ನನ್ನು ಟಚ್ ಮಾಡಲು ಬಿಡಲಿಲ್ಲ. ಈ ಘಟನೆಗಳನ್ನು ನೆನೆಸಿಕೊಂಡಾಗ ಈಗಲೂ ಭಯವಾಗುತ್ತದೆ ಎಂದಿದ್ದಾರೆ.