ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾರೆ ರ್‍ಯಾಪಿಡ್ ರಶ್ಮಿ | ಅರಳು ಹುರಿದಂತೆ ಪಟಪಟನೆ ಮಾತಾಡುತ್ತಾರೆ ರ್‍ಯಾಪಿಡ್ ರಶ್ಮಿ | ಕೊನೆಗೂ ಬಿಚ್ಚಿಟ್ಟಿದ್ದಾರೆ ಮದುವೆ ವಿಚಾರ, ಏನ್ ಹೇಳಿದ್ದಾರೆ ನೀವೇ ಕೇಳಿ. 

ಬೆಂಗಳೂರು (ಅ. 22): ಕಿರುತೆರೆ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 6 ಶುರುವಾಗಿದೆ. ಒಟ್ಟು 18 ಜನ ಬಿಗ್ ಬಾಸ್ ಮನೆ ಸೇರಿದ್ದಾರೆ. ಅದರಲ್ಲಿ ರ್‍ಯಾಪಿಡ್ ರಶ್ಮಿ ಕೂಡಾ ಒಬ್ಬರು. 

ಬಿಗ್ ಬಾಸ್ ಮನೆ ಪ್ರವೇಶ ಮಾಡಿದ ಸ್ಪರ್ಧಿಗಳು ಯಾರ್ಯಾರು?

ಬಿಗ್ ಎಫ್ ಎಂ ನಲ್ಲಿ ಪಟಪಟನೆ ಅರಳು ಹುರಿದಂತೆ ಮಾತನಾಡುವ ರ್‍ಯಾಪಿಡ್ ರಶ್ಮಿ ಬಿಗ್ ಬಾಸ್ ಮನೆಯಲ್ಲಿ ತಮ್ಮ ಮಾತಿನಿಂದ ಎಲ್ಲರ ಮನ ಗೆಲ್ಲುವಲ್ಲಿ ಸಂಶಯವಿಲ್ಲ. ಮಾತೇ ಇವರ ಬಂಡವಾಳ. ಬಿಗ್ ಬಾಸ್ ಮನೆಗೆ ಹೋಗುವಾಗ ರ್‍ಯಾಪಿಡ್ ರಶ್ಮಿ ತಮ್ಮ ಮದುವೆಯ ಗುಟ್ಟನ್ನು ರಟ್ಟು ಮಾಡಿದ್ದಾರೆ. ಬಹಳಷ್ಟು ಮಂದಿಗೆ ಇವರಿಗೆ ಮದುವೆ ಆಗಿದೆಯೋ, ಇಲ್ವೋ ಎಂಬ ಕುತೂಹಲ ಇದ್ದೇ ಇರುತ್ತೆ. ಇವರ ಕುತೂಹಲಕ್ಕೆ ರಶ್ಮಿ ಉತ್ತರ ಕೊಟ್ಟಿದ್ದಾರೆ. 

ಕನ್ನಡ ಬಿಗ್‌ಬಾಸ್‌ ದಿಟ್ಟ ನಿರ್ಧಾರ, ಮನೆ ಪ್ರವೇಶ ಮಾಡಿದ ಗೇ!

ತಮಗೆ ಮದುವೆ ಆಗಿರುವ ಸುದ್ದಿಯನ್ನು ರಶ್ಮಿ ಬಿಚ್ಚಿಟ್ಟಿದ್ದಾರೆ. ಕೆಲ ತಿಂಗಳ ಹಿಂದೆ ಡೇವೀಸ್ ಎಂಬುವವರೊಡನೆ ಮದುವೆ ಆಗಿರುವುದಾಗಿ ಹೇಳಿದ್ದಾರೆ. 

ಮದುವೆ ಬಗ್ಗೆ ರಶ್ಮಿ ಏನ್ ಹೇಳಿದ್ದಾರೆ ಕೇಳೋಕೆ ಈ ಲಿಂಕ್ ಕ್ಲಿಕ್ ಮಾಡಿ