ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡಿರುವ ಶ್ರುತಿ ಹರಿಹರನ್ ಬೆಂಬಲಕ್ಕೆ ಕೆಲ ನಟಿಯರೂ ನಿಂತಿದ್ದಾರೆ. ಈ ನಡುವೆ ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿದ ಶ್ರುತಿ ಅದೇ ವ್ಯಕ್ತಿ ಅಂದರೆ ಅರ್ಜುನ್ ಸರ್ಜಾ ವಿರುದ್ಧ ಮತ್ತೆ 4 ಜನರು ಇದೆ ತೆರನಾದ ಆರೋಪ ಮಾಡಿದ್ದಾರೆ ಎಂದಿದ್ದಾರೆ. ಹಾಗಾದರೆ ಆ 4 ಜನ ನಟಿಯರು ಯಾರು?

ಶ್ರುತಿ ಹರಿಹರನ್ ಮೊದಲಿನಿಂದಲೂ ತಮ್ಮ ಬೋಲ್ಡ್ ನಡವಳಿಕೆಗೆ ಹೆಸರುವಾಸಿ. ಹಿಂದೊಮ್ಮೆ ಕನ್ನಡ ಸಿನಿಮಾ ರಂಗದಲ್ಲಿಯೂ ಕಾಸ್ಟಿಂಕ್ ಕೌಚ್ ಇದೆ ಎಂದು ಹೇಳಿ ಸುದ್ದಿ ಮಾಡಿದ್ದ ಶ್ರುತಿ ನಿನ್ನೆ ಸೋಶಿಯಲ್ ಮೀಡಿಯಾದ ಮುಖೇನ ಅರ್ಜುನ್ ಸರ್ಜಾ ವಿರುದ್ಧ ಆರೋಫ ಮಾಡಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ ದಾಖಲೆ ಒದಗಿಸುತ್ತೇನೆ ಎಂದು ಹೇಳಿದ್ದರು. ಆದರೆ ಕಾನುನು ಹೋರಾಟಕ್ಕೆ ಮುಂದಾದರೆ ಆಗ ದಾಖಲೆ ಒದಗಿಸುತ್ತೇನೆ ಎಂದರು. ಆದರೆ ಅರ್ಜುನ್ ಸರ್ಜಾ ನಡವಳಿಕೆ ಬಗ್ಗೆಯೇ ಇನ್ನು 4 ಜನ ತಮ್ಮ ನೋವು ಹೇಳಿಕೊಂಡಿದ್ದಾರೆ. ಆದರೆ ಅವರು ವಿವಿಧ ಕಾರಣಕ್ಕೆ ತಮ್ಮ ಹೆಸರು ಬಹಿರಂಗ ಮಡಲು ಒಪ್ಪಿಲ್ಲ ಎಂದಿದ್ದಾರೆ.

Rapid ರಶ್ಮಿ ಜತೆ ಲೈಂಗಿಕತೆ ಬೋಲ್ಡ್ ಮಾತು, ಶ್ರುತಿ ಕೊಟ್ಟ ಸ್ಪಷ್ಟನೆ ಏನು?

ಒಂದೇ ವ್ಯಕ್ತಿ ಬಗ್ಗೆ ಇಷ್ಟೊಂದು ಜನ ಮಾತನಾಡುವಾಗ ತಪ್ಪು ಯಾವ ಕಡೆ ಇರುತ್ತದೆ? ಎಂದು ಮಾಧ್ಯಮಗಳನ್ನೇ ಶ್ರುತಿ ಪ್ರಶ್ನೆ ಮಾಡಿದ್ದಾರೆ. ಸಮಯ ಬಂದಾಗ ಇನ್ನು ಒಂದಿಷ್ಟು ವಿವರಗಳನ್ನು ಹೇಳಬೇಕಾಗಿದೆ. ಈ ಹಿಂದೆ ನನಗೆ ಮಾತನಾಡುವ ಧೈರ್ಯ ಇರಲಿಲ್ಲ. ಈಗ ಅಭಿಯಾನ ಶುರುವಾದ ಮೇಲೆ ನನಗಾದ ಅನ್ಯಾಯವನ್ನು ಸರಿಪಡಿಸಿಕೊಳ್ಳಲು ಮತ್ತೂ ಇನ್ನು ಮುಂದೆ ಯಾರಿಗೂ ಹೀಗೆ ಆಗದಂತೆ ತಡೆಯಲು ಸತ್ಯ ಹೇಳಿದ್ದೇನೆ ಎಂದಿದ್ದಾರೆ.