ರಂಗಭೂಮಿ ಹಿನ್ನಲೆಯಿಂದ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಆಗಮಿಸಿದ ಅಕ್ಷತಾ ಪಾಂಡವಪುರ ತನ್ನ ಬಹುದಿನಗಳ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದಾಗ ಸೂಪರ್ ಕುಕ್ ಹಾಗೂ ಅಭಿನೇತ್ರಿಯಾಗಿ ಇದ್ದ ಅಕ್ಷತಾ ಇಂದು ತನ್ನದೇ ಸ್ಟುಡಿಯೋ ತೆರೆದಿದ್ದಾರೆ.

'I am an actor' ಹೆಸರಿನ ಆ್ಯಕ್ಟಿಂಗ್ ಸ್ಟುಡಿಯೋ ಹಾಗೂ 'Cafe! Akshatha's Kitchen' ಹೆಸರಿನ ಕೆಫೆ ತೆರೆದಿದ್ದಾರೆ. ಜೂನ್ 30 ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್‌ ಟೌನ್‌ಶಿಪ್‌ನಲ್ಲಿ ಉದ್ಘಾಟಿಸಿದ್ದಾರೆ.

 

3 ತಿಂಗಳು ನಡೆಯುವ ಆ್ಯಕ್ಟಿಂಗ್‌ ತರಬೇತಿಯನ್ನು ಎರಡು ಬ್ಯಾಚ್‌ ಆಗಿ ವಿಂಗಡ ಮಾಡಲಾಗುತ್ತದೆ. ವಾರದಲ್ಲಿ 5 ದಿನಗಳ ಕಾಲ ನಡೆಯುವ ತರಬೇತಿಯಲ್ಲಿ 10 ಜನ ಭಾಗಿಯಾಗಬಹುದು ಹಾಗೂ ವೀಕೆಂಡ್‌ನಲ್ಲಿ ನಡೆಯುವುದರಲ್ಲೂ 10 ಜನ ಭಾಗಿಯಾಗಬಹುದು. ಇದರಲ್ಲಿ ಭಾಗಿಯಾಗಲು ಇಚ್ಛಿಸುವವರು channeltheater@gmail.com ಗೆ ಇ-ಮೇಲ್ ಮಾಡಬಹುದು ಅಥವಾ ದೂ- 9742604509 ಕರೆ ಮಾಡಬಹುದು.