ಶನಿವಾರದ ಕೊನೆಯಲ್ಲಿ ಸ್ಪರ್ಧಿಗಳಿಗೆ ಅಂಬಿ ನಿಧನದ ಸುದ್ದಿ ತಿಳಿದಿತ್ತು. ಇದಾದ ಮೇಲೆ ಅಂಬರೀಶ್‌ಗೆ ನಮನ ಸಲ್ಲಿಸಲು ಬಿಗ್‌ಬಾಸ್ ತಿಳಿಸಿದ್ದರು.

ಒಂದು ನಿಮಿಷ ಮೌನವನ್ನಾಚರಿಸಿ ಸ್ಪರ್ಧಿಗಳು ಅಂಬಿಗೆ ತಮ್ಮದೇ ರೀತಿಯಲ್ಲಿ ಗೌರವ ಸಲ್ಲಿಸಿದರು. ಸ್ಪರ್ಧಿಗಳೆಲ್ಲರೂ ಅಂಬಿ ಅವರ ಚಿತ್ರದ ಗೀತೆಗಳು, ನೃತ್ಯವನ್ನು ಅಭ್ಯಾಸ ಮಾಡಿ ಪ್ರದರ್ಶಿಸಿದರು.

ರಶ್ಮಿ ಮತ್ತು ನವೀನ್ ಸಜ್ಜು ಹಾಡುಗಳ ಅರ್ಪಣೆ ಮಾಡಿದರು. ‘ಅಂತ’ ಚಿತ್ರದ ‘ನಾನು ಯಾರು ಯಾವ ಊರು ಹಾಡಿಗೆ ಶಶಿ, ಜಯಶ್ರೀ ತಂಡದಿಂದ ನೃತ್ಯ ಮೂಡಿ ಬಂತು.

ಮನೆ ಮಂದಿಗೆ ಬಿಗ್‌ ಶಾಕ್ ಕೊಟ್ಟ ಆ 3 ಸುದ್ದಿಗಳು!

ಸುಪರ್ ಸಂಡೇ ವಿತ್ ಸುದೀಪ ಕಾರ್ಯಕ್ರಮದ ಬದಲು ಅಂಬಿಗೆ ನಮನ ಸಲ್ಲಿಕೆ ಮಾಡಲಾಯಿತು. ಹೊರ ಬಂದಿರುವ ಆನಂದ್ ತಮ್ಮ ಅಭಿಪ್ರಾಯ ಯಾವತ್ತು ಹಂಚಿಕೊಳ್ಳುತ್ತಾರೆ ನೋಡಬೇಕಿದೆ.

ಬಿಗ್ ಬಾಸ್ ಪ್ರಸಾರ ಮಾಡುವ ವಾಹಿನಿ ತನ್ನ ಫೇಸ್‌ ಬುಕ್ ಪೇಜ್‌ನಲ್ಲಿ ಮನೆಯಿಂದ ಹೊರಬಿದ್ದ ಸ್ಪರ್ಧಿಗಳ ಚಿತ್ರಕ್ಕೆ ಮಾರ್ಕ್ ಮಾಡುತ್ತದೆ. ರಕ್ಷಿತಾ, ರವಿ, ಆ್ಯಡಂ, ರೀಮಾ, ಸ್ನೇಹಾ ಆಚಾರ್ಯ ಚಿತ್ರಕ್ಕೆ ಮಾರ್ಕ್ ಮಾಡಲಾಗಿದೆ. ಆದರೆ ಆನಂದ ಚಿತ್ರಕ್ಕೆ ಮಾರ್ಕ್ ಮಾಡಿಲ್ಲ. ಹಾಗಾಗಿ ಆನಂದ ಸಿಕ್ರೇಟ್ ರೂಂಗೆ ತೆರಳುತ್ತಾರಾ ಎಂಬ ಮಾತು ವ್ಯಕ್ತವಾಗಿದೆ.