Asianet Suvarna News Asianet Suvarna News

ತುಳಸಿ ಪ್ರಸಾದ್‌ಗೆ ತೆರೆದ ಬಾಗಿಲು? ಹೊಸ  ಬಿಗ್‌ಬಾಸ್ ಮನೆ ಹೇಗಿದೆ?

ವಿಚಿತ್ರ ಮ್ಯಾನರಿಸಂ ಮೂಲಕವೇ ಒಂದು ರೀತಿಯ ಬೇಡದ ಖ್ಯಾತಿ ಗಳಿಸಿಕೊಂಡಿರುವ ತುಳಸಿ ಪ್ರಸಾದ್ ಈ ಬಾರಿಯ ಬಿಗ್ ಬಾಸ್ ಮನೆ ಪ್ರವೇಶ ಮಾಡುತ್ತಾರೋ? ಹೌದು ಎನ್ನುತ್ತಿವೆ ಮೂಲಗಳು..

Bigg Boss Kannada season 6 to go on air from October 21 New things
Author
Bengaluru, First Published Oct 19, 2018, 5:43 PM IST
  • Facebook
  • Twitter
  • Whatsapp

ಡಬ್ ಸ್ಮಾಶ್ ಸ್ಟಾರ್ ಎಂದು ಕರೆಸಿಕೊಂಡಿದ್ದ ತುಳಸಿ ಪ್ರಸಾದ್ ಹಸ್ತಮೈಥುನದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ನಂತರ  ಅದಕ್ಕೆ ಸ್ಪಷ್ಟನೆ ನೀಡಿರುವ ತುಳಸಿ ಪ್ರಸಾದ್ ಈ ವಿಡಿಯೋ ಮಾಡಲು ಕಾರಣ ಏನು ಎಂಬುದನ್ನು ಹೇಳಿದ್ದರು. ಇದೀಗ ಬಿಗ್ ಬಾಸ್ ಸರದಿ..

ಇದೇ ಅಕ್ಟೋಬರ್ 21 ರಿಂದ  ಬಿಗ್ ಬಾಸ್ ಕನ್ನಡ ಸೀಸನ್ 6ರ ಮನೆ ತೆರೆದುಕೊಳ್ಳಲಿದೆ. ಈ ಬಾರಿ ಒಟ್ಟು 18 ಸ್ಪರ್ಧಿಗಳಿಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ. ಬೆಂಕಿಗೆ ಆಹುತಿಯಾಗಿ ಸುಟ್ಟು ಹೋಗಿದ್ದ ಮನೆಯನ್ನು ಪುನರ್ ನಿರ್ಮಾಣ ಮಾಡಲಾಗಿದ್ದು ಮೇಕಪ್ ರೂಂ ಪರಿಚಯ ಮಾಡಲಾಗುತ್ತಿದೆ.

ಕನ್ನಡ ಬಿಗ್‌ ಬಾಸ್‌ಗೆ 8 ಸ್ಪರ್ಧಿಗಳು ಫೈನಲ್? ಇನ್ನುಳಿದವರು ಯಾರು?

ಜತೆಗೆ ಅಂಗಳದಲ್ಲಿ ದುಬಾರಿ ಗಿಡವೊಂದನ್ನು ಬೆಳೆಸಲಾಗಿದೆ. ಆದರೆ ಇದೆಲ್ಲದರ ನಡುವೆ ಈ ಬಾರಿ ಸೆಲೆಬ್ರಿಟಿಗಳ ಸಂಂಖ್ಯೆ ಕಡಿಮೆ ಮಾಡಲಾಗುತ್ತಿದ್ದು ಸೆಮಿ ಸೆಲೆಬ್ರಿಟಿಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ತುಳಸಿ ಪ್ರಸಾದ್ ಪ್ರವೇಶ ಮಾಡುತ್ತಾರೋ ಎನ್ನುವುದು ಸದ್ಯ ಎಲ್ಲರ ಮುಂದಿರುವ ಪ್ರಶ್ನೆ.

ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಟ್ರೋಲ್ ಆರಂಭವಾಗಿದ್ದು ತುಳಸಿ ಪ್ರಸಾದ್ ಪರ-ವಿರೋಧದ ಚರ್ಚೆಯೂ ಆರಂಭವಾಗಿದೆ. ಒಟ್ಟಿನಲ್ಲಿ ಬಿಗ್ ಬಾಸ್ ಕನ್ನಡದ ಕ್ರೇಜು ಮತ್ತೊಮ್ಮೆ ಶುರುವಾಗುತ್ತಿದೆ.

Follow Us:
Download App:
  • android
  • ios