ಭಾನುವಾರ ಬಿಗ್ ಬಾಸ್ ಮನೆಗೆ ನವರಸ ನಾಯಕ ಜಗ್ಗೇಶ್ ಹೋಗಿ ಬಂದರು. ತಮ್ಮ ಮಾತುಗಳಲ್ಲಿ ಮನೆ ಕಟ್ಟಿದ ಜಗ್ಗೇಶ್  ಮನೆ ಮಂದಿಯ ಜ್ಞಾನ ಹೆಚ್ಚಿಸಿ ಬಂದರು. ಸುದೀಪ್ ಜತೆ ತಮ್ಮ ಸಿನಿಮಾ ಜೀವನದ ನೂರಾರು ಕತೆಗಳನ್ನು ಹಂಚಿಕೊಂಡರು

ಬಿಗ್ ಬಾಸ್ ನೀಡಿದ ವಿವಿಧ ಉಡುಗೊರೆಯನ್ನು ಮನೆ ಮಂದಿಗೆ ನೀಡಿದರು.ಬಾಡಿ ಬಿಲ್ಡರ್ ರವಿಗೆ ಕೋಲು, ಆ್ಯಂಡಿಗೆ ಮುಸುಕು, ರಶ್ಮಿಗೆ ಪಾಪಸ್ ಕಳ್ಳಿ, ಆನಂದಗೆ ಸೀಟಿ, ಸೋನುಗೆ ಪಟಾಕಿ, ಧನರಾಜ್ ಗೆ ಹೆಸರಿನ ಪಟ್ಟಿ, ಅಕ್ಷತಾಗೆ ಗೆಜ್ಜೆ ಹೀಗೆ ಅವರವರಿಗೆ ತಕ್ಕುದಾದುದನ್ನೇ ನೀಡಿದರು.

ಭಾನುವಾರ ಶಿವರಾಜ್ ಕುಮಾರ್ ನೀಡಿದ ಮಾಂಸದ ಊಟವನ್ನು ಆ್ಯಂಡಿಯೊಬ್ಬನನ್ನು ಹೊರತು ಪಡಿಸಿ ಮನೆ ಮಂದಿಯಲ್ಲ ಕುಳಿತು ಸೇವಿಸಿದರು.