ಮೇಘಶ್ರೀ ಬಿಗ್  ಬಾಸ್ ಮನೆಯಲ್ಲಿ  ಇದ್ದಿದ್ದು ಎರಡೇ ವಾರ. ಆದರೆ ಸಖತ್ತಾಗೆ ರಂಜಿಸಿದ್ದರು. ಸಗಣಿ ಬಳಿದು ನಾಮಿನೇಶನ್ ಮಾಡುವಾಗ ಬರೋಬ್ಬರಿ ಳು ಜನ ಅವರ ಚಿತ್ರಕ್ಕೆ ಸಗಣಿ ಮೆತ್ತಿದ್ದರು.

ಒಮ್ಮೆ ಮಾತನಾಡುತ್ತ ಮೇಘಶ್ರೀ ಈ ಮನೆಯಲ್ಲಿ ನನಗೆ ಯಾರು ನೋವು ಮಾಡಿಲ್ಲ ಎಂದು ಹೇಳುವ ಬದಲು ಯಾರು ಲವ್ ಮಾಡಿಲ್ಲ ಎಂದು ಹೇಳೀದ್ದರು. ಸೂಪರ್ ಸಂಡೇ ಯಲ್ಲಿ ಸುದೀಪ್ ಇದನ್ನೆ ಇಟ್ಟುಕೊಂಡು ಕಾಲೆಳೆದರು.

ಆ್ಯಂಡಿ ಪರ್ಫ್ಯೂಮ್ ಹುಚ್ಚಾಟ... ಅಯ್ಯಯ್ಯೋ ಕವಿತಾ ಆರೋಪ!

ಆದರೆ ಬಿಗ್ ಬಾಸ್ ಮನೆಯಲ್ಲಿ ನಿಮಗೆ ಒಬ್ಬರ ಮೇಲೆ ಲವ್ ಆಗಿತ್ತಲ್ಲ? ಎಂದು ಪ್ರಶ್ನೆ ಎಸೆದರು. ಮೇಘಶ್ರೀ ಇಲ್ಲ..ಆಗೇ ಇಲ್ಲ ಎಂದರು. ಇದಾದ ಮೇಲೆ ಸುದೀಪ್ ಸಮಜಾಯಿಸಿ ನೀಡಿದರು.

ನಿಮಗೆ ಲವ್ ಆಗಿದ್ದು ಬಿಗ್ ಬಾಸ್ ಮೇಲೆಯೇ...ಮೆಕಪ್ ಮಾಡಿಕೊಳ್ಳುವಾಗ ಕ್ಯಾಮರಾ ಹತ್ತಿರ ಬಂದಾಗ ಬಿಗ್ ಬಾಸ್ ಉದ್ದೇಶಿಸಿಯೇ ಮಾತನ್ನಾಡುತ್ತಿದ್ದೀರಿ ಎಂದು ಹೇಳಿದರು.