ಮೇಘಶ್ರೀ ಜನ್ಮದಿನದಿಂದ ಆರಂಭವಾದ ಬಿಗ್ ಬಾಸ್ ಮನೆಯಲ್ಲಿ ಸಂಭ್ರಮ ಜಾಸ್ತಿ ಹೊತ್ತು ಉಳಿಯಲಿಲ್ಲ.  ಬಿಗ್ ಬಾಸ್ ನೀಡಿದ ಸೂಪರ್ ಹೀರೋ ವರ್ಸ್ ಸೂಪರ್‌ ವಿಲನ್‌ನ ಲಕ್ಸುರಿ ಬಜೆಟ್‌ ಟಾಸ್ಕ್‌  ಬೆಂಕಿ ಹಚ್ಚಿತು.

ಹೀರೋಗಳಾಗಿ ಶಶಿ, ಧನರಾಜ್‌, ಅಕ್ಷತಾ, ಕವಿತಾ, ನಿವೇದಿತಾ, ಜೀವಿತಾ ಇದ್ದರೆ, ವಿಲನ್‌ಗಳಾಗಿ ಇದ್ದದ್ದು ಮುರಳಿ, ರಶ್ಮಿ, ಆಂಡಿ, ರಾಕೇಶ್‌, ನವೀನ್ ಮತ್ತು ಮೇಘಶ್ರೀ  ಇದ್ದರು. 

ಮನೆಯಲ್ಲಿ ಸೌಂದರ್ಯ ಸಮರ, ಕವಿತಾ vs ಮೇಘಶ್ರೀ...ಸಗಣಿ ಮೆತ್ತಿಕೊಂಡ ಸ್ಪರ್ಧಿಗಳು

ಆ್ಯಂಡಿ ಡಿಯೋಟ್ರಂಟ್‌ನ್ನು ಎದುರಿಗಿನ ತಂಡದ ಸ್ಪರ್ಧಿಗಳ ಮೇಲೆ ನಿರಂತರವಾಗಿ ಸ್ಪ್ರೇ ಮಾಡುತ್ತ ಬಂದರು. ಇದು ತುಂಬಾ ಕಿಕರಿಕಿರಿ ತಂತು. ಆ್ಯಂಡಿ ತನ್ನ ಪ್ಯಾಂಟ್ ನೊಳಗೆ ಕೈ ಹಾಕುತ್ತಿದ್ದಾನೆ ಎಂದು ಕವಿತಾ ಗಂಭೀರ ಆರೋಪ ಮಾಡಿದರು. ತಂದೆ-ತಾಯಿ ಬಗ್ಗೆ ಅವಾಚ್ಯವಾಗಿ ಮಾತನಾಡುತ್ತಿದ್ದಾರೆ ಎಂದು ಆ್ಯಂಡಿ ಆರೋಪ ಮಾಡಿದರು.

ಜೈಲಿನಲ್ಲಿರುವ ವಿಜ್ಞಾನಿಯನ್ನು ಬಿಡಿಸಲು ಸೂಪರ್‌ ಹೀರೋಗಳು ಬೀಗಗಳನ್ನು ತೆಗೆಯಬೇಕಾಗಿತ್ತು. ಅದನ್ನು ತಡೆಯಲು ಸೂಪರ್‌ ವಿಲನ್‌ಗಳು ಸಖತ್ತಾಗೆ ಆಟ ಆಡಿದರು. ನಾಳೆ ವಿಲನ್ ಮತ್ತು ಹೀರೋಗಳು ಅದಲು ಬದಲಾಗಲಿದ್ದಾರೆ. ಸಾಕಷ್ಟು ಏಟು ತಿಂದ ಹೀರೋಗಳ ತಂಡ ಆಟ ಬಿಟ್ಟುಕೊಟ್ಟಿತು.