ಸೂಪರ್ ಸಂಡೇ ವಿತ್ ಸುದೀಪ್‌ಗೆ ನವದಂಪತಿ ಆಗಮಿಸಿದ್ದರು. ದಿಗಂತ್ ಮತ್ತು ಐಂದ್ರಿತಾ ರೇ ಆಗಮಿಸಿದ್ದರು. ಸುದೀಪ್ ಪ್ರಶ್ನೆಗಳ ಮೇಲೆ ಪ್ರಶ್ನೆ ಎಸೆದು ಒಮ್ಮೊಮ್ಮೆ ಕಾಲೆಳೆದು ಇಬ್ಬರು ಒಬ್ಬರನ್ನೊಬ್ಬರು ಹೇಗೆ ಅರಿತುಕೊಂಡಿದ್ದಾರೆ ಎಂದು ಪರೀಕ್ಷೆ ಸಹ ಮಾಡಿದರು.

ಕನ್ನಡದ ಹೊಸ ಕ್ಯೂಟ್ ಕಪಲ್‌ಗೆ ವೇದಿಕೆಯಾಗಿದ್ದು ಬಿಗ್‌ ಬಾಸ್. ಪಕ್ಕಾ ದಕ್ಷಿಣ ಭಾರತದ ಶೖಲಿಯಲ್ಲಿ ಆಗಮಿಸಿದ್ದ ಹೊಸ ಜೋಡಿಗೆ ಬಿಗ್ ಬಾಸ್ ಸಖತ್ತಾಗೆ ತಮಾಷೆ ಮಾಡಿದರು. ಮದುವೆ ಬೇಡವಾಗಿತ್ತು ಆದರೂ ಒಪ್ಪಿಕೊಂಡೆ..ಮದುವೆಯಾದ ಮೇಲೆ ಏನೂ ಬದಲಾಗಿಲ್ಲ ಎಂದು ದಿಗಂತ್ ಹೇಳಿದರು.

ಅತಿ ಹೆಚ್ಚು ನಾಟಕ ಮಾಡುವವರು ಯಾರು? ಜಯಶ್ರೀ ಹೇಳಿದ ಸತ್ಯಕ್ಕೆ ಬೆಚ್ಚಿಬಿದ್ದ ಸುದೀಪ್

ದಿಗಂತ್ ಮತ್ತು ಐಂದ್ರಿತಾ ಮನಸಾರೆ ಚಿತ್ರವನ್ನು ಮನಸಾರೆ ಹೊಗಳಿದರು. ಯಾವುದಕ್ಕೂ ಇಲ್ಲ ಎಂದು ದಿಗಂತ್ ಹೇಳುವುದಿಲ್ಲ. ಅದೇ ಕಾರಣಕ್ಕೆ ಕೆಲ ಡಬ್ಬಾ ಪ್ರಾಜೆಕ್ಟ್ ಗಳನ್ನು ಒಪ್ಪಿಕೊಂಡು ಬಿಡುತ್ತಾನೆ ಇದನ್ನು  ಬದಲಾಯಿಸಿಕೊಳ್ಳಬೇಕು ಎಂದು ಹೇಳಿದರು. ಐಂದ್ರಿತಾ ಮುಂಗೋಪ ಬಿಡಬೇಕು ಎಂದು ದಿಗಂತ್ ಸಲಹೆ ನೀಡಿದರು. ಐಂದ್ರಿತಾ ಪಡೆಯಲು 9 ವರ್ಷ ಶ್ರಮ ಪಟ್ಟಿದ್ದೇನೆ ಎಂಬ ಮಾತು ನಗೆ ಬುಗ್ಗೆ ಹರಿಸಿತು.