ಬೆಂಗಳೂರು[ಜ.04]  ಐಟಿ ಅಧಿಕಾರಿಗಳು ಕಿಚ್ಚ ಸುದೀಪ್ ಮನೆ ಮೇಲೆಯೂ ದಾಳಿ ನಡೆಸಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 6 ನಡೆಸಿಕೊಡುವ ಸುದೀಪ್ ಅವರಿಗೂ ಐಟಿ ಬಿಸಿ ತಟ್ಟಿದೆ.

ಐಟಿ ಅಧಿಕಾರಿಗಳ ಪರಿಶೀಲನೆಯಿಂದಾಗಿ ಬಿಗ್ ಬಾಸ್ ಶೂಟಿಂಗ್ ಸ್ಥಗಿತವಾಗುವ ಸಾಧ್ಯತೆ ಇದೆ. ಇಂದು ಅಂದರೆ ಶುಕ್ರವಾರ ಸಂಜೆಯೋಳಗೆ ಪರಿಶೀಲನೆ ಮುಗಿಯದೆ ಇದ್ದಲ್ಲಿ ಬಿಗ್ ಬಾಸ್ ಶೂಟಿಂಗ್ ಗೆ ಸುದೀಪ್  ತರೆಳಲು ಸಾಧ್ಯವಿಲ್ಲ. ಪ್ರತಿ ಶುಕ್ರವಾರ ಶನಿವಾರದಂದು ಬಿಗ್ ಬಾಸ್ ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಿದ್ದ ಸುದೀಪ್ ಪಾಲ್ಗೊಳ್ಳುತ್ತಾರೆ.

ಬಿಗ್‌ ಬಾಸ್ ಮನೆಯಲ್ಲಿ ಮೇಘಶ್ರೀಗೆ ಇವರ ಮೇಲೆ ಲವ್‌ ಆಗಿತ್ತಂತೆ!

ಇನೋವೇಟಿವ್ ಫಿಲ್ಮಂ ಸಿಟಿಯಲ್ಲಿ ಚಿತ್ರೀಕರಣ ನಡೆಯುತ್ತದೆ. ವಾರದ ಕತೆ ಕಿಚ್ಚನ ಜತೆ ಮತ್ತುಸೂಪರ್ ಸಂಡೆ ವಿತ್ ಸುದೀಪ್ ಕಾರ್ಯಕ್ರಮಗಳು ಕ್ರಮವಾಗಿ ಶನಿವಾರ ಮತ್ತು ಭಾನುವಾರ ಪ್ರಸಾರವಾಗಬೇಕು. ಆದರೆ ಐಟಿ ದಾಳಿ ಕಾರ್ಯಕ್ರಮದ ಶೂಟಿಂಗ್ ಸ್ಥಗಿತಕ್ಕೆ ಕಾರಣವಾಗಬಹುದು.