ಬಿಗ್‌ ಬಾಸ್ ಕನ್ನಡಕ್ಕೆ ತೆರೆ ಬಿದ್ದಿದೆ. ಆದರೆ  ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್‌ಗಳಿಗೆ ಕೊರತೆ ಇಲ್ಲ. ಶಶಿ ಗೆದ್ದಿದ್ದರೂ ಪರ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ನವೀನ್ ಸಜ್ಜು ಗೆಲ್ಲಬೇಕಾಗಿತ್ತು ಎಂದು ಬಹುತೇಕರು ಹೇಳುತ್ತಿದ್ದಾರೆ. ಜತೆಗೆ ಬಿಗ್ ಬಾಸ್ 7 ಹೇಗೆ ಗೆಲ್ಲಬೇಕು ಎಂಬುದನ್ನು ಹೇಳಿಕೊಟ್ಟಿದ್ದಾರೆ.

ಆಧುನಿಕ ರೈತ ಶಶಿ ಬಿಗ್ ಬಾಸ್ ವಿನ್ನರ್ ಆಗಿದ್ದರೂ ಪರ ಮತ್ತು ವಿರೋಧದ ಅಭಿಪ್ರಾಯಗಳು ನಿಂತೆ ಇಲ್ಲ. ಶಶಿ ಆಧುನಿಕ ರೈತ ಎಂದು ಹೇಳಿಕೊಂಡಿದ್ದಾರೆ.. ಆದರೆ ಅವರು ನಕಲಿ ರೈತ ಎಂದು ಕೆಲವರು ಆಕ್ರೋಶ ಹೊರಹಾಕಿದ್ದಾರೆ.

Next ಸೀಸನ್ 7 ಗೆ ಬರೋರು ವಿನ್ ಆಗೋ ಟ್ರಿಕ್ ಹೇಳ್ಕೊಡ್ತೀನಿ ನೋಡಿ... ರೈತ ಅಂತ ಹೇಳ್ಕೊಂಡ್ ಬನ್ನಿ...1st ಯಾವ್ದಾದ್ರು ಹುಡ್ಗಿ ಜೊತೆಲೆ ಇರಿ... ಹುಡ್ಗಿಗೋಸ್ಕರ ಕೈ ಬೆರಳ್ ಮುರ್ಕೋಳಿ ಆಗ ಕಲರ್ಸ್ ಚಾನಲ್ ನವ್ರು ಫಿಸಿಕಲ್ ಟಾಸ್ಕ್ ಕೊಡೋದ್ ಕಡಿಮೆ ಮಾಡ್ತಾರೆ.....ಆರಾಮಾಗಿ ಫೈನಲ್ಗೆ ಬಂದು ಕಪ್ ಗೆಲ್ಲಬಹುದು ಎಂಬ ಕಮೆಂಟ್‌ಗಳು ಬಂದಿದೆ.

ಆಧುನಿಕ ರೈತ ಶಶಿ ಬಿಗ್‌ ಬಾಸ್ ವಿನ್ನರ್‌ ಆಗಿದ್ದು ಹೇಗೆ?

ಶಶಿ ಯಾವ ಕಾರಣಕ್ಕೆ ವಿನ್ ಆದರೂ ಎಂಬ ವಿಮರ್ಶೆಗಳು ನಡೆದಿವೆ. ಒಬ್ಬರು ರೈತರ ಹೆಸರು ಹೇಳಿಕೊಂಡು ಮುಖ್ಯಮಂತ್ರಿ ಆದರು,, ಇನ್ನೊಬ್ಬರು ರೈತರ ಹೆಸರು ಹೇಳಿಕೊಂಡು ಬಿಗ್‌ ಬಾಸ್ ಗೆದ್ದರು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.