ಬೆಂಗಳೂರು[ಜ. 21]  ಬಿಗ್​ಬಾಸ್​ ಸೀಸನ್​​ 6ರ ಗ್ರ್ಯಾಂಡ್​ ಫಿನಾಲೆಗೆ ಇನ್ನೊಂದು ವಾರ ಬಾಕಿ  ಇದೆ.  ಭಾನುವಾರ ರಾತ್ರಿ ನಡೆದ ಮಿಡ್​ ವೀಕ್​​ ಎಲಿಮಿನೇಷನ್​ನಲ್ಲಿ ಧನರಾಜ್​ ಬಿಗ್​ಬಾಸ್​ ಮನೆಯಿಂದ ಹೊರ ಬಂದಿದ್ದಾರೆ.

ರಾಕೇಶ್ ಶನಿವಾರ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದರು ನವೀನ್, ಶಶಿ, ಕವಿತಾ, ಆ್ಯಂಡಿ, ರಶ್ಮಿ ಮತ್ತು ಧನರಾಜ್ ಪೈಕಿ ನವೀನ್ ಮತ್ತು ಧನರಾಜ್ ಫಿನಾಲೆಗೆ ಎಂಟ್ರಿ ಪಡೆದುಕೊಂಡಿದ್ದರು ಎಂದು ಮೊದಲು ಹೇಳಲಾಗಿತ್ತು. ನವೀನ್‌ಗೆ ಫಿನಾಲೆ ಟಿಕೆಟ್ ಸಹ ನೀಡಲಾಗಿತ್ತು.

ಬಿಗ್‌ಬಾಸ್‌ಗೆ ತುಳಸಿ ಪ್ರಸಾದ್ ಬಾರದಿರಲು ಅಸಲಿ ಕಾರಣ!

ಮಿಡ್ ನೈಟ್ ಎಲಿಮಿನೇಶನ್ ಮೂಲಕ ಸ್ಪರ್ಧಿಗಳಿಗೆ ಸರಿಯಾದ ಟಾಸ್ಕ್ ನೀಡಿದ ಬಿಗ್ ಬಾಸ್ ಯಾವ ಕಾರಣಕ್ಕೆ ನೀವು ಮನೆಯಲ್ಲಿ ಇರಬೇಕು ಎಂಬುದನ್ನು ಸಾಬೀತು ಮಾಡಿ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಎಸೆದಿದ್ದಾರೆ.