ಕಳೆದ ಮೂರು ವಾರಗಳಿಂದ ಜಯಶ್ರೀ ತಮ್ಮ ಮನಸ್ಥಿತಿ ಸರಿ ಇಲ್ಲ ಎಂದು ಸುದೀಪ್ ಕೊಟ್ಟ ಬ್ರೇಕ್ ನಲ್ಲಿ ಹೇಳಿಕೊಂಡರು. ಅದಕ್ಕೆ ಕಾರಣವನ್ನು ನೀಡಿದರು.

ಚೆಂಡು ಎಸೆಯುವ ಆಟದಲ್ಲಿ ಜಯಶ್ರೀಗೆ ಎಸೆಯಬೇಡಿ, ಆಕೆ ಬಳಿ ಹಿಡಿದುಕೊಳ್ಳಲು ಸಾಧ್ಯವಿಲ್ಲ ಎಂದು ಕವಿತಾನೇ ಹೇಳಿದ್ದರಂತೆ.. ಈ ವಿಚಾರ ಕವಿತಾ ಅವರಿಗೆ ಗೊತ್ತಿರಲಿಲ್ಲ. ಬಿಗ್ ಬಾಸ್ ನಿಂದ ಹೊರಹೋಗುವ ಮುನ್ನ ಇದನ್ನು ಹೇಳಿದ್ದು ಸೇವ್ ಆದ ಕವಿತಾ ಸಹ ಭಾವುಕರಾದರು.

ಯಾವುದೇ ಟಾಸ್ಕ್ ಎದುರಾದಾಗ ಮನೆ ಮಂದಿ ನನ್ನನ್ನು ಬದಿಗೆ ನಿಲ್ಲಿಸುತ್ತಿದ್ದೀರಿ ಎಂದು ಸಹ ಜಯಶ್ರೀ ಹೇಳಿಕೊಂಡರು. ಅಂತಿಮವಾಗಿ ಹೊರಡುವಾಗ ಲಗೇಜ್ ತರಲು ಶಶಿ ಸಹಾಯ ಮಾಡಿದರೂ ಜಯಶ್ರೀ ಅದನ್ನು ಸ್ವೀಕಾರ ಮಾಡಲಿಲ್ಲ

ಕವಿತಾ ಗೌಡ ಆ ಒಂದು ಶಬ್ದ ಸಿಕ್ಕಾಪಟ್ಟೆ ವೈರಲ್.. ಬೇಕಿತ್ತಾ!

ಬಿಗ್ ಬಾಸ್ ಮನೆಯಲ್ಲಿ ಜಯಶ್ರೀ, ಶಶಿ ಮತ್ತು ಕವಿತಾ ಗೌಡ ಮೊದಲಿನಿಂದಲೂ ಗ್ರೂಪ್ ಆಗಿದ್ದಾರೆ ಎಂಬುದು ಬೇರೆಯವರ ವಾದ. ಧನರಾಜ್ ಸಹ ಈ ಗ್ರೂಪ್ ನಲ್ಲೇ ಇದ್ದಾರೆ ಎಂದು ಆ್ಯಂಡಿ ಹಲವಾರು ಸಾರಿ ವಾದ ಮಾಡಿದ್ದಾರೆ. ಇದೀಗ ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಮಾಡಿರುವ ಜೀವಿತಾ ಅವರಿಗೂ ನಾಯಕತ್ವ ಬಿಟ್ಟುಕೊಟ್ಟು ಗ್ರೂಪ್ ಗೆ ಸೇರಿಸಿಕೊಳ್ಳಲಾಗಿದೆ ಎಂದು ಶನಿವಾರದ  ಸಂತೆಯಲ್ಲಿ ವಿಷಯ ಹೊರಬಂತು.