ಬಿಗ್ ಬಾಸ್ ಕನ್ನಡ ಮನೆ ಪ್ರವೇಶಿಸಿದ ಮೊದಲ ಸ್ಪರ್ಧಿ ಸೋನು ಪಾಟೀಲ್ ಯಾರು?
ಬಿಗ್ ಬಾಸ್ ಕನ್ನಡ ಸೀಸನ್ 6 ಆರಂಭವಾಗಿದೆ. ಮೊದಲ ಸ್ಪರ್ಧಿಯಾಗಿ ಬಾಗಲಕೋಟೆಯ ಸೋನು ಪಾಟೀಲ್ ಪಟೇಲ್ ಪ್ರವೇಶ ಮಾಡಿದ್ದಾರೆ. ಹಾಗಾದರೆ ಈ ಸೋನು ಪಾಟೀಲ್ ಯಾರು? ಇಲ್ಲಿದೆ.
ಬೆಂಗಳೂರು[ಅ.21] ಕನ್ನಡ ಸಿನಿಮಾ ರಂಗ ಮತ್ತು ಕಿರುತೆರೆಯಲ್ಲಿ ಏಕಕಾಲಕ್ಕೆ ಗುರುತಿಸಿಕೊಂಡಿದ್ದ ಸೋನು ಪಾಟೀಲ್‌ಬಿಗ್ ಬಾಸ್ ಮನೆ ಸೇರಿದ್ದಾರೆ. ವಿಜಯಪುರದಲ್ಲಿ ನಾನು ಎಂಎ ಜರ್ನಲಿಸಂ ಮಾಡಿ ಪತ್ರಿಕೋದ್ಯಮದ ಕೆಲಸ ಅರಸಿ ಬಂದವರನ್ನು ನಟನಾ ಲೋಕ ಸೆಳೆಯಿತು.
ಮೊದಲು ಮೊಗ್ಗಿನ ಮನಸು ಧಾರಾವಾಹಿಯಿಂದ ನಟನೆ ಶುರುವಾಯಿತು.ಮೊಗ್ಗಿನ ಆನಂತರ ಗಾಂಧಾರಿ, ಅಮೃತ ವರ್ಷಿಣಿ, ಪಂಚ ಕಚ್ಚಾಯ, ಶ್ರೀಮಾನ್ ಶ್ರೀಮತಿ ಹೀಗೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು. ಧರ್ಮಸ್ಯೆ ಸಿನಿಮಾದಲ್ಲಿ ಕಾಮಿಡಿ ಪಾತ್ರವೊಂದನ್ನು ಮಾಡಿದರು. ಸಂಚಾರಿ ವಿಜಯ್ ಜತೆ ಕೊಟ್ಟೂರೇಶ್ವರ ಮಹಾತ್ಮೆ, ಗರ ಚಿತ್ರದಲ್ಲಿ ತಬಲಾ ನಾಣಿ, ಮನದೀಪ್ ರಾಯ್ ಸೇರಿದಂತೆ ವಿವಿಧ ನಟರೊಂದಿಗೆ ಪಾತ್ರ ಹಂಚಿಕೊಂಡವರು.
ಅಜ್ಜಿ ಎಂದರೆ ಇವರಿಗೆ ಅಚ್ಚು ಮೆಚ್ಚು. ತಮ್ಮ ಬೈಕಿನಲ್ಲಿ 94 ವರ್ಷದ ಅಜ್ಜಿಯನ್ನು ಕೂರಿಸಿಕೊಂಡು ರೌಂಡ್ಸ್ ಹೊಡೆಸುವ ಸೋನು ಪಾಟೀಲ್ ಬಿಗ್ ಬಾಸ್ ನ ಮೊದಲ ಸ್ಪರ್ಧಿಯಾಗಿ ಮನೆ ಪ್ರವೇಶ ಮಾಡಿದ್ದಾರೆ. ಪಟ ಪಟನೆ ಮಾತನಾಡುತ್ತ ಬಿಗ್ ಬಾಸ್ ಮನೆ ಸೇರಿರುವ ಸೋನು ತಾನು ಆಟಂ ಬಾಂಬ್ ಎಂದೇ ಹೇಳಿಕೊಂಡಿದ್ದಾರೆ.