ಬಿಗ್ ಬಾಸ್ ಮನೆಯಲ್ಲಿ ಎರಿದ್ದ ಬಿಸಿ ಆರುತ್ತಿದೆ. ಲವ್ ಸ್ಟೋರಿಗಳು ಹುಟ್ಟಿಕೊಳ್ಳುತ್ತಿವೆ. ಸತ್ಯವನ್ನು ಸ್ಪರ್ಧಿಗಳು ಸಂಕೋಚವಿಲ್ಲದೆ ಒಪ್ಪಿಕೊಳ್ಳುತ್ತಿದ್ದಾರೆ. ಒಂದು ವಾರ  ಕೊನೆಯಾಗಿದ್ದು ಪ್ರೀತಿ-ಪ್ರೇಮ-ಪ್ರಣಯದ ಮಾತುಗಳು ಆರಂಭವಾಗಿದೆ.

ಬಿಗ್ ಬಾಸ್ ನಿಂದ ಶಿಕ್ಷೆಗೆ ಗುರಿಯಾಗಿ ಜೈಲು ಸೇರಿದ್ದ ಆ್ಯಡಂ ಮತ್ತು ನಯನಾ ಬಿಡುಗಡೆಯಾಗಿದ್ದಾರೆ. ನಾಣ್ಯ ಸಂಗ್ರಹದ ಟಾಸ್ಕ್ ನಲ್ಲಿಗಳಿಸಿದ್ದ ಅಂಕದ ಆಧಾರದಲ್ಲಿ ಮನೆಯವರಿಗೆ ದಿನಸಿ ವಸ್ತು ಖರೀದಿ ಮಾಡಲು ಬಿಗ್ ಬಾಸ್ ತಿಳಿಸಿದ್ದರು. ಆದರೆ ಸಮಯದ ಅಭಾವವವೋ, ಹೊಸ ಮನೆಯಾದ್ದರಿಂದ ಗೊಂದಲವೋ ಅಕ್ಕಿಯನ್ನು ಬಿಟ್ಟು ಉಳಿದ ವಸ್ತುಗಳನ್ನು ಖರೀದಿ ಮಾಡಿಕೊಮಡರು. 2600 ಅಂಕ ಕೈನಲ್ಲಿದ್ದರೂ 900 ಅಂಕಕ್ಕೆ ಮಾತ್ರ ವಸ್ತು ಖರೀದಿ ಮಾಡಿಕೊಂಡರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಗ್ ಬಾಸ್ ಪ್ರತಿಯೊಬ್ಬರಿಗೂ ತಮ್ಮ ತಮ್ಮ ಬಗ್ಗೆ ಹೇಳಿಕೊಳ್ಳಲು, ಮನೆಯ ಸದಸ್ಯರು ಒಬ್ಬರನ್ನೊಬ್ಬರು ಅರಿಯಲು ವಿಶೆಷ ರೀತಿಯಾದ ಟಾಸ್ಕ್ ವೊಂದನ್ನು ನೀಡಿದ್ದರು. ಅದರಂತೆ ಪ್ರಶ್ನೆಗಳನ್ನು ಕೇಳಿ ನಂತರ ಯಾರು ಆ ಸದಸ್ಯ ಎಂದು ಊಹೆ ಮಾಡಬೇಕಿತ್ತು. ಈ ಟಾಸ್ಕ್ ನಲ್ಲಿ ಅನೇಕ ಅಂಶಗಳು ಬಹಿರಂಗವಾದವು. ಇನ್ನೊಂದು ಕಡೆ ರೀಮಾ ಮತ್ತು ಆರ್‌ ಜೆ ರಾಕೇಶ್ ನಡುವೆ ಹುಡುಗರು ಹೇಗಿರಬೇಕು ಎಂಬ ಮಾತುಕತೆ ರಾತ್ರಿಯೆಲ್ಲಾ ನಡೆದೇ ಇತ್ತು.

ರೀಮಾ ಲಿಫ್ಟ್ ನಲ್ಲಿ ಎರಡನೇ ಕಿಸ್ ಪಡೆದುಕೊಂಡಿದ್ದು, ಶಶಿ 10 ಜನ ಹುಡುಗೀಯರೊಂದಿಗೆ ಡೇಟ್ ಮಾಡಿದ್ದು ಎಲ್ಲದಕ್ಕಿಂತ ಮುಖ್ಯವಾಗಿ ಆರ್ ಜೆ ರಾಕೇಶ್ ಗೆ 200 ಜನ ಗರ್ಲ್ ಫ್ರೆಂಡ್ ಇದ್ದರು ಎಂಬ ಸಂಗತಿ ಬಹಿರಂಗವಾಯ್ತು ! ಅದಕ್ಕೆ ರಾಕೇಶ್ ವಿವರಣೆಯನ್ನು ನೀಡಿದರು.