ಬಿಗ್ ಬಾಸ್ ಮನೆಯಲ್ಲಿ ಕಾಂಚಾಣ ಸದ್ದು ಮಾಡಿತು. ಐಪಿಎಲ್ ರೀತಿಯಲ್ಲೇ ಬಿಡ್ಡಿಂಗ್ ಮಾಡಲಾಯಿತು. ಎರಡು ತಂಡಗಳ ನಾಯಕರು ತಮಗೆ ಬೇಕಾದವರನ್ನು ಬಿಗ್ ಬಾಸ್ ನೀಡಿದ ಹಣದಲ್ಲಿ ಖರೀದಿ ಮಾಡಿದರು.

ನಾಲ್ಕನೇ ವಾರದ ಲಗ್ಜುರಿ ಬಜೆಟ್ ಆಗಿ ‘ಗೊಂಬೆ ಆಟವಯ್ಯಾ’ ಟಾಸ್ಕ್ ನೀಡಲಾಯಿತು. ಎರಡು ತಂಡಗಳನ್ನಾಗಿ ಮಾಡಿ ಒಂದೊಂದು ತಂಡವೂ ಗೊಂಬೆ ತಯಾರಿಸಬೇಕು. ಬಳಿಕ ಅದನ್ನು ಮಾರಾಟ ಮಾಡಬೇಕು ಎಂಬ ನಿಯಮ ಬಿಗ್ ಬಾಸ್ ಮನೆಯಲ್ಲಿ ಜಾರಿಯಾಯಿತು. ಇನ್ನೊಂದು ಕಡೆ ಗೊಂಬೆ ಕಳ್ಳರು ತಲೆ ಎತ್ತಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಶ್ಮಿ ನಾನು ಆ್ಯಂಡಿಗೆ ಹಾರ್ಟ್ ನೀಡಿದ್ದೇನೆ. ಹಾಗಾಗಿ ಬಿಡ್ ಮಾಡಲೇಬೇಕಿಲ್ಲ ಆದರೂ ಬಿಗ್ ಬಾಸ್ ನಿಯಮದಂತೆ ಬಿಡ್ ಮಾಡುತ್ತಿದ್ದೇವೆ ಎಂದು ಹೇಳಿದರು. ಕೊನೆಯದಾಗಿ ಆ್ಯಂಡಿ 16050 ರೂ.ಗೆ ರಶ್ಮಿ ಗುಂಪಿಗೆ ಸೇರಿಕೊಂಡರು. ನವೀನ್ 17750ಕ್ಕೆ ಅಕ್ಷತಾ ಗುಂಪಿಗೆ ಸೇರಿದರು. ರಾಕೇಶ್ ಗೆ ರಶ್ಮಿ ನೀಡಿದ್ದು ಒಂದು ಸೀರೆ ಒಂದು ಬ್ಲೌಸ್ ಪೀಸ್... ಕೊನೆಗೆ ರಾಕೇಶ್ 5100ಕ್ಕೆ ಅಕ್ಷತಾ ರಾಕೇಶ್ ಅವರನ್ನು ಖರೀದಿ ಮಾಡಿದರು.

ಧನರಾಜ್ ಗೆ 100 ರೂ. ಬೆಲೆ ಕಟ್ಟಲಾಯಿತು. ಕನಿಷ್ಠ 1000 ರೂ. ಎಂದು ಧನರಾಜ್ ಹೇಳಿದರು. ಶಶಿ ಸಹ ಅತಿ ಹೆಚ್ಚಿನ ಬೆಲೆಗೆ ಮಾರಾಟವಾದರು. ಮೊದಲ ಸುತ್ತಿನಲ್ಲಿ ಬಿಗ್ ಬಾಸ್ 20 ಗೊಂಬೆಗಳಿಗೆ ಬೇಡಿಕೆ ನೀಡಿದರು. ಗೊಂಬೆಯಾಟದಲ್ಲಿ ಒಬ್ಬೊಬ್ಬರು ಹೊಸ ಹೊಸ ತಂತ್ರ ಶುರುಮಾಡಿದರು. ಇದ್ದಕ್ಕಿದ್ದಂತೆ ಬಿಗ್ ಬಾಸ್ ಮನೆಯಲ್ಲಿ ಗೊಂಬೆ ಕಳ್ಳರು ಕಾಣಿಸಿಕೊಂಡರು.