ಆಂಡಿ ಮುಖಕ್ಕೆ ಬಾರಿಸಿದ ಕವಿತಾ ತಾಯಿ! ಇದೇನಿದು?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 10, Jan 2019, 4:14 PM IST
bigg-boss-kannada-season-6-day-79-highlights Kavitha Gowda Mother Enters House
Highlights

ಬಿಗ್ ಬಾಸ್ ಮನೆಯಲ್ಲಿ ಒಂದು ಹಂತಕ್ಕೆ ಟಾಸ್ಕ್‌ಗಳೆಲ್ಲ ಮುಕ್ತಾಯವಾಗಿದೆ. ಆದರೆ  ಸ್ಪರ್ಧಿಗಳ ಮನೆಯವರು ಭೇಟಿ  ನೀಡುತ್ತಿರುವುದು ಹೊಸ ಹೊಸ ಅಂಶಗಳನ್ನು ತೆರೆದಿಡುತ್ತಿದೆ.

ಬಿಗ್ ಬಾಸ್ ಮನೆಗೆ ಕವಿತಾ ಗೌಡ ಅವರ ತಾಯಿ ಬಂದಿದ್ದರು. ಬಂದವರು ಮನೆಯವರೊಂದಿಗೆ ಹರಟೆ ಹೊಡೆದರು. ಹರಟೆ ಹೊಡೆದಿದ್ದು ಮಾತ್ರ ಅಲ್ಲ ಆಂಡಿ ಮುಖಕ್ಕೆ ಒಂದು ಬಾರಿಸಿದರು. 

ಬಿಗ್‌ಬಾಸ್‌ ಮನೆಯಲ್ಲಿ ಧನರಾಜ್‌ಗೆ ಮುತ್ತಿನ ಮಳೆ

ಟಾಸ್ಕ್ ಹೊರತುಪಡಿಸಿ ಆಂಡಿ ಮುಖಕ್ಕೆ ಬಾರಿಸಿದ್ದು ಕವಿತಾ ತಾಯಿ ಮಾತ್ರ ಎಂಬ ಮಾತು ಸಹ ರಾಕೇಶ್‌ರಿಂದ ಕೇಳಿಬಂತು. ತಾಯಿಯೊಂದಿಗೆ ಮಾತನಾಡುತ್ತ ಗಾರ್ಡನ್ ಏರಿಯಾ ಬಳಿ ಕರೆದುಕೊಂಡು ಹೋದರು.

ಬಿಗ್ ಬಾಸ್‌ ಮನೆಯಲ್ಲಿ ಬಿಗ್ ಬದ್ರರ್ ನೋಡಿಕೊಂಡು ಬಂದವನಿದ್ದಾನೆ

ಮಾತನಾಡುತ್ತ ಕವಿತಾ ಗೌಡ, ಹೊರಗೆ ನನ್ನ ಆಟ ಹೇಗೆ ಕಾಣುತ್ತಿದೆ, ಆಂಡಿ ಮತ್ತು ನನ್ನ ವಿಚಾರದ ಬಗ್ಗೆ ಏನು ಮಾತನಾಡಿಕೊಳ್ಳುತ್ತಿದ್ದಾರೆ? ಎಂದು ಪ್ರಶ್ನೆ ಮಾಡಿದರು.  ಅದಕ್ಕೆ ಕವಿತಾ ತಾಯಿ ನೀನು ಚೆನ್ನಾಗಿ ಆಡುತ್ತಿದ್ದೀಯಾ..ವಿನ್ನರ್ ನೀನೆ ಎಂದು ಹೇಳಿದರು. 

ಕವಿತಾ ಗೌಡ ಆ ಒಂದು ಶಬ್ದ ಸಿಕ್ಕಾಪಟ್ಟೆ ವೈರಲ್.. ಬೇಕಿತ್ತಾ!


 

loader