ಬಿಗ್ ಬಾಸ್ ಮನೆಗೆ ಸ್ಪರ್ಧಿಗಳ ಮನೆಯವರು ಭೇಟಿ ನೀಡುತ್ತಿದ್ದಾರೆ. ಒಬ್ಬೊಬ್ಬರದ್ದು ಒಂದೊಂದು ಕತೆ. ಧನರಾಜ್ ಅವರ ಪತ್ನಿ ಶಾಲಿನಿ ಸಹ ಬಿಗ್‌ ಬಾಸ್ ಮನೆಗೆ ಆಗಮಿಸಿ ಗಂಡನೊಂದಿಗೆ ಕಾಲ ಕಳೆದರು.

ಧನರಾಜ್ ತಮ್ಮ ಲವ್ ಸ್ಟೋರಿಯನ್ನು ಬಿಗ್ ಬಾಸ್ ಮನೆಯಲ್ಲಿ ಅನಾವರಣ ಮಾಡಿದರು. 7 ವರ್ಷ ಲವ್ ಮಾಡಿದ್ರಂತೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಜೋಡಿಯಾಗಿ ಭೇಟಿ ನೀಡುತ್ತಿದ್ದರಂತೆ. ತಮ್ಮ ಹೆಂಡತಿಯೊಂದಿಗಿನ ಸಂತಸದ ಕ್ಷಣಗಳನ್ನು ಧನರಾಜ್ ಹಂಚಿಕೊಂಡರು. ಮಾಡಿದ್ದ ಚೇಷ್ಟೆ-ಕುಚೇಷ್ಟೆಗಳನ್ನು ಬಿಚ್ಚಿಟ್ಟರು. ಮನೆಯಿಂದ ಹೊರ ಹೋಗುವಾಗ ಮುತ್ತಿನ ಮಳೆಗರೆದರು. 

ನಂತರ ಧನರಾಜ್‌, ಶಾಲಿನಿ ಇಬ್ಬರೂ ಎಲ್ಲರೊಂದಿಗೆ ಖುಷಿ ಖುಷಿಯಾಗಿ ಸಂಭಾಷಣೆ ನಡೆಸಿದರು. ಶಾಲಿನಿ ಬಿಗ್‌ ಮನೆಯಿಂದ ಹೊರ ಹೋಗುವ ಸಂದರ್ಭದಲ್ಲಿ ಧನರಾಜ್‌ ಅನ್ನು ಪಾಸ್‌ ಮಾಡಲಾಗಿತ್ತು. ಈ ವೇಳೆಯಲ್ಲೇ ಹೆಂಡತಿಯ ಪ್ರೀತಿಗೆ ಧನರಾಜ್ ಪಾತ್ರವಾದರು.

ಮನೆಯಲ್ಲಿರುವ ನಾಯಿ, ಬಾತ್‌ರೂಂ ಕಮೋಡ್‌ ಯಾರು? ಇದೆಂಥಾ ಹೋಲಿಕೆ!

ಕವಿತಾ ತಾಯಿ ಸಹ ಆಗಮಿಸುವಾಗ ಕವಿತಾ ಗೌಡ ಅವರನ್ನು ಪಾಸ್ ಮಾಡಲಾಗಿತ್ತು. ಪುತ್ರಿಯೊಂದಿಗೆ ಹಾಡಿಗೂ ಹೆಜ್ಜೆ ಹಾಕಿದರು. ನಂತರ ಕವಿತಾ ತಾಯಿ ಕನ್ಫೆಷನ್‌ ರೂಮ್‌ನಿಂದ ಹೊರ ನಡೆದರು. ರಶ್ಮಿ ಅವರ ಪತಿ ಬೆಳಗ್ಗೆ ಸ್ಕ್ರೀನ್‌ನಲ್ಲಿ ಮಾತನಾಡಿದ್ದರೂ ಮನೆಗೆ ಎಂಟ್ರಿ ಕೊಟ್ಟರು.