ಬಿಗ್ ಬಾಸ್ ಮನೆಯ ಆ್ಯಂಡಿಗೆ ನಿರ್ದೆಶಕನ ಕ್ಯಾಪ್ ಹಾಕಿಸಲಾಗಿದೆ. ಕಿರುಚಿತ್ರ ಶೂಟಿಂಗ್ ನಡೆಯುತ್ತಿದ್ದು ಮನೆಯಲ್ಲಿ ಹೊಸ ಚಿತ್ರ ನಿರ್ಮಾಣದ ಸದ್ದು ಜೋರಾಗಿ ಕೇಳಿಬರುತ್ತಿದೆ.

ಆದರೆ ಇದೆಲ್ಲದಕ್ಕಿಂತ ಮುಖ್ಯವಾಗಿ ಬಿಗ್ ಬಾಸ್ ತಮ್ಮಜೀವನಾನುಭವವನ್ನು ಹಂಚಿಕೊಳ್ಳಲು ಸ್ಪರ್ಧಿಗಳಿಗೆ ಹೇಳಿದ್ದರು. ತಾವು ಎದುರಿಸಿದ ಕಷ್ಟ ಮತ್ತು ಸವಾಲುಗಳನ್ನು ಮನೆಯವರ ಮುಂದೆ ಹೇಳಲು ಕೇಳಿಕೊಳ್ಳಲಾಗಿತ್ತು.

ಕವಿತಾ ಗೌಡ ಆ ಒಂದು ಶಬ್ದ ಸಿಕ್ಕಾಪಟ್ಟೆ ವೈರಲ್

ನವೀನ್ ಸಜ್ಜು ಹೇಳಿದ ಘಟನೆಗಳು ನಿಜಕ್ಕೂ ಕಣ್ಣಂಚಲ್ಲಿ ನೀರು ತರಿಸಿದವು. 100ರೂ. ನಿಂದ ಕೆಲಸ ಆರಂಭಿಸಿದ್ದೆ. ಮೊದಲು ಎಲೆಕ್ಟ್ರಿಶಿಯನ್ ಆಗಿ ವರ್ಕ್ ಮಾಡಿದೆ. ಅದಾದ ಮೇಲೆ ಚಿನ್ನದ ಅಂಗಡಿಯಲ್ಲಿ ಕೆಲಸ. ಒಮ್ಮೆ ಯಾವುದೋ ಉಂಗುರ ಕಳವಾಯಿತೆಂದು ಎಲ್ಲ ಬಟ್ಟೆ ಬಿಚ್ಚಿಸಿದರು. ಇದಾದ ಮೇಲೆ ಸ್ನೇಹಿತರೆಲ್ಲ ಸೇರಿ ಹೈನುಗಾರಿಕೆ ಮಾಡುವ ಸಾಹಸಕ್ಕೆ ಮುಂದಾದೆವು. ಜಾಗವೊಂದನ್ನು ಬಾಡಿಗೆ ಪಡೆದು ಸಮತಟ್ಟು ಮಾಡುತ್ತಿದ್ದಾಗ ಅಕ್ಕ ಪಕ್ಕದವರು ನಮಗೇನು ಸಗಣಿ ವಾಸನೆ ಕುಡಿಸುತ್ತೀರಾ ಎಂದು ಬೆದರಿಸಿದರು.

ಇದರಲ್ಲಿ ಯಾವುದು ಸರಿ ಹೋಗಲಿಲ್ಲ. ನಂತರ ಆಟೋ ಓಡಿಸಿದೆ. ಗಾರೆ ಕೆಲಸ ಮಾಡಿದೆ. ಆದರೆ ಮನೆಯವರಿಗೆ ನಾನು ಆಟೋ ಓಡಿಸಿದ ವಿಚಾರ ಗೊತ್ತಿಲ್ಲ. ಬಿಗ್ ಬಾಸ್ ಮನೆಯಲ್ಲಿಯೇ ಇದನ್ನು ಮೊದಲು ಹೇಳಿದ್ದೇನೆ. ಅಲ್ಲಿಂದ ಬೆಂಗಳೂರಿಗೆ ಬಂದೆ. ಬೆಂಗಳೂರಿನ ಕಷ್ಟದ ಕತೆಯನ್ನು ಇನ್ನೊಮ್ಮೆ ಹೇಳುತ್ತೇನೆ ಎಂದರು.

ಸಂದರ್ಶನದಲ್ಲಿ ಜಯಶ್ರೀ ಬಿಚ್ಚಿಟ್ಟ ಸತ್ಯ ..ಬಿಗ್ ಬ್ರದರ್ ನೋಡಿಕೊಂಡು ಬಂದವನಿದ್ದಾನೆ

ಕವಿತಾ ಗೌಡ ತಮ್ಮ ಶಾಲಾ ದಿನಗಳನ್ನು ನೆನಪು ಮಾಡಿಕೊಂಡರು. ಕ್ಲಾಸಿನಲ್ಲಿ ನಿದ್ದೆ ಮಾಡುತ್ತಿದ್ದೆ. ನೃತ್ಯ ಮತ್ತು ಕ್ರೀಡೆಯಲ್ಲಿ ಆಸಕ್ತಿ ಇತ್ತು ಎಂದು ಹಂಚಿಕೊಂಡು.

ರಶ್ಮಿ ಮಾತನಾಡಿ, ನನಗೆ 2007ರಲ್ಲೇ ಮದುವೆ ಆಗಿತ್ತು. ಆದರೆ ಆ ಮದುವೆ ಜಾಸ್ತಿ ದಿನ ಬಾಳಿಕೆ ಬರಲಿಲ್ಲ. 2010ರಲ್ಲಿ ವಿಚ್ಛೇದನ ಪಡೆದುಕೊಂಡೆ. ನ್ಯಾಯಾಲಯಕ್ಕೆ ಅಲೆದಾಡುವ ದೃಶ್ಯ ಇನ್ನು ಕಣ್ಣ ಮುಂದೆ ಬರುತ್ತದೆ ಎಂದು ಕಣ್ಣೀರ ಕೋಡಿಯಾದರು. ತನ್ನ ದೖತ್ಯ ದೇಹವನ್ನು ಅಣಕಿಸುತ್ತಿದ್ದುದರ ಬಗ್ಗೆ ಆ್ಯಂಡಿ ಮಾತನಾಡಿದರು.