ಬಿಗ್ ಬಾಸ್ ಮನೆಯಲ್ಲಿ ಮಧ್ಯರಾತ್ರಿಯಲ್ಲಿ ಎಮ್ಮೆ ಕೂಗುವ ಶಬ್ದ ಕೇಳಿಬಂತು. ಗಾರ್ಡ್ನ್ ಏರಿಯಾದಲ್ಲೆ ನಾಮಿನೇಶನ್ ಮಾಡಲು ಬಿಗ್ ಬಾಸ್ ಆದೇಶ ನೀಡಿದರು. ಸ್ಪರ್ಧಿಗಳ ಚಿತ್ರಕ್ಕೆ ಸಗಣಿ ಮೆತ್ತಿ ನಾಮಿನೇಶನ್ ಮಾಡುವಂತೆ ಹೇಳಲಾಯಿತು.

ಬಿಗ್‌ ಬಾಸ್ ಮನೆಯಲ್ಲಿ ಸುಂದರಿಯರ ಮಧ್ಯೆ ಸ್ಪರ್ಧೆ ಶುರುವಾಗಿದೆ. ಕವಿತಾ ಮೇಘಶ್ರೀ ಅವರನ್ನು ನಾಮಿನೇಟ್ ಮಾಡಿದರೆ ಮೇಘಶ್ರೀ ಕವಿತಾ ಅವರನ್ನು ನಾಮಿನೇಟ್ ಮಾಡಿದರು. ಮೇಘಶ್ರೀ, ಕವಿತಾ, ನಿವೇದಿತಾ ಗೌಡ, ಆ್ಯಂಡಿ, ಧನರಾಜ್ ಮತ್ತು ಶಶಿ ನಾಮಿನೇಟ್ ಆದರು. ಮನೆಯ ನಾಯಕಿ ಜೀವಿತಾ ರಶ್ಮಿ ಮತ್ತು ರಾಕೇಶ್ ಅವರನ್ನು ನೇರವಾಗಿ  ನಾಮಿನೇಟ್ ಮಾಡಿದರು.

ಬಿಗ್‌ ಬಾಸ್ ಮನೆಯಲ್ಲಿ ಅತಿ ಹೆಚ್ಚು ನಾಟಕ ಮಾಡುವವರು ಯಾರು? ಜಯಶ್ರೀ ಹೇಳಿದ ಸತ್ಯ

ಹಿಂದಿನ  ವಾರದ ಕ್ಯಾಪ್ಟನ್ಸಿ ಆಯ್ಕೆಯ ಟಾಸ್ಕ್ ನಲ್ಲಿ ಶಶಿ ಮತ್ತು ಧನರಾಜ್ ನಡೆದುಕೊಂಡ ರೀತಿ ಧನರಾಜ್‌ಗೆ ಸಖತ್ತಾಗೆ ಏಟು ನೀಡಿತು. ಗ್ರೂಪ್ ಆಧಾರದಲ್ಲಿ ನಾಮಿನೇಶನ್ ಮಾಡಬಹುದು ಎಂಬ ಯಾವ ಚರ್ಚೆಗೂ ಬಿಗ್ ಬಾಸ್ ಅವಕಾಶವನ್ನೇ ನೀಡಲಿಲ್ಲ.  ಬೆಳಗಿನ ಜಾವವೇ ಸ್ಪರ್ಧಿಗಳನ್ನು ಎಬ್ಬಿಸಿದ್ದ ಬಿಗ್‌ಬಾಸ್ ಮನೆ ಮಂದಿಗೆ ನಿದ್ರೆ ಮಾಡಲು ಬಿಡಲಿಲ್ಲ.