ಧನರಾಜ್‌ ಅವರನ್ನು ಕನ್ಫೆಶನ್ ರೂಂ ಗೆ ಕರೆದ ಬಿಗ್‌ಬಾಸ್‌ ಅಕ್ಷತಾರನ್ನು ನಾಮಿನೇಟ್ ಮಾಡಿ ಮನೆಯಿಂದ ಹೊರಹಾಕುವ ಫ್ರಾಂಕ್ ಟಾಸ್ಕ್ ನೀಡಿದರು. ಮೊದಲೆ ತಿಳಿಸಿದ್ದರಿಂದ ಎಲ್ಲರೂ ಅಕ್ಷತಾ ಅವರನ್ನೇ ನಾಮಿನೇಟ್ ಮಾಡಿದರು.

ಇದಾದ ಮೇಲೆ ಶುರುವಾಗಿದ್ದು ನಿಜವಾದ ಮಜಾಆದರೆ, ಈ ವಿಚಾರ ಅಕ್ಷತಾ ಹಾಗೂ ರಾಕೇಶ್‌ಗೆ ಮಾತ್ರ ಗೊತ್ತಿರಲಿಲ್ಲ. ಹೀಗಾಗಿ, ಅಕ್ಷತಾರನ್ನು ಹೆಚ್ಚು ಮಂದಿ ನಾಮಿನೇಟ್ ಮಾಡಿದ ಕಾರಣ ಅವರನ್ನು ಮನೆಯಿಂದ ಹೊರಹಾಕುವ ಬಗ್ಗೆ ನಿರ್ಧಾರ ಮಾಡಲಾಯಿತು. ರಾಕೇಶ್ ಕಣ್ಣೀರು ಹಾಕಿದ್ದು ಸಖತ್ ಮಜಾ ಕೊಟ್ಟಿತು.

ಅದಲು ಬದಲಾದ ಪಾತ್ರಗಳು, ಸಿನಿಮಾ ಮಂದಿರದಲ್ಲಿ ಸೀಕ್ರೆಟ್ ಫಿಲ್ಮ್?

ಬಿಗ್ ಬಾಸ್ ಮನೆ ಮಂದಿಗೆ  ಮೆಣಸಿನಕಾಯಿ ತಿನ್ನುವ ಸ್ಪರ್ಧೆ ನೀಡಿದ್ದರು.  ರಾಕೇಶ್‌ ಹಾಗೂ ಜಯಶ್ರೀ ಮೆಣಸಿನಕಾಯಿ ತಿಂದಿದ್ದು, ರಾಕೇಶ್‌ ಅತಿ ಹೆಚ್ಚು ಮೆಣಸಿನಕಾಯಿ ತಿಂದರೆ ಮತ್ತೊಂದು ತಂಡದಲ್ಲಿದ್ದ ಜಯಶ್ರೀ ಕಡಿಮೆ ಮೆಣಸಿನಕಾಯಿಯನ್ನು ತಿಂದರು. ಸೋನು ಪಾಟೀಲ್ ಸಹ ಭಾಗವಹಿಸುವ ಯತ್ನ ಮಾಡಿದರು. ಮೆಣಸಿನಕಾಯಿ ತಿಂದ ನಂತರ ಸಕ್ಕರೆಗಾಗಿ ಮನೆ ಮಂದಿ ಓಟ ನಡೆಸಿದ್ದೂ ಮಜಾ ಕೊಟ್ಟಿತು.