ಬಿಗ್‌ ಬಾಸ್ ಮನೆಯಲ್ಲಿ ಟ್ರಾಫಿಕ್  ಆಟ ಶುರುವಾಗಿದೆ.  ಬಿಗ್‌ಬಾಸ್ ಬಿಸಿ ಏರುತ್ತಿದೆ ಎನ್ನುವಾಗ ಎದುರಾಗುವ ಟಾಸ್ಕ್‌ಗಳೂ ಕೆಲವೊಮ್ಮೆ ಸ್ಪರ್ಧಿಗಳ ಹಾದಿ ತಪ್ಪಿಸುತ್ತದೆ.

ಕವಿತಾ ನಾಯಕಿಯಾಗಿರುವ ಮನೆಯಲ್ಲಿ ಎಲ್ಲವೂ ಅಂದುಕೊಂಡಂತೆ ಸಾಗುತ್ತಲೇ ಇಲ್ಲ. ಈ ನಡುವೆ ಬಿಗ್‌ ಬಾಸ್ ಟ್ರಾಫಿಕ್ ಟಾಸ್ಕ್ ನೀಡಿದ್ದಾರೆ. ಆ್ಯಂಡಿ ಮತ್ತು ನಯನಾ ಮನೆಯ ಅಧಿಕಾರಿಗಳಾದರೆ, ನವೀನ್‌, ಅಕ್ಷತಾ ಆಟೋ ಚಾಲಕರಾಗಿದ್ದರು. ಉಳಿದವರು ಸಾಮಾನ್ಯ ಪ್ರಜೆಗಳಾಗಿದ್ದರು. ನವೀನ್ ಅವರನ್ನು ಜೈಲಿಗೆ ಕಳುಹಿಸಲಾಯಿತು.

ಇದೆ ಮೊದಲ ಸಾರಿ ಮುರುಳಿ ಮನೆಯಲ್ಲಿ ಅಬ್ಬರಿಸಿದರು. ಅಡುಗೆ ಜವಾಬ್ದಾರಿ ವಹಿಸಿಕೊಂಡಿದ್ದ ಮುರುಳಿ ಕಿಡಿಕಾರಿದರು. ಭ್ರಷ್ಟಾಚಾರ ಮಾಡುವ ಅಧಿಕಾರಿಗಳ ವಿರುದ್ಧ ಕೆಂಡ ಕಾರಿದರು.

ಮನೆ ಮಂದಿಗೆ ಬಿಗ್‌ ಶಾಕ್ ಕೊಟ್ಟ ಆ 3 ಸುದ್ದಿಗಳು!

ಸಿನಿಮಾ ಮಂದಿರವು ಮನೆಯಲ್ಲಿ ತೆರೆದುಕೊಂಡಿದ್ದು ಕಳದೆ ಸೀಸನ್‌ನಲ್ಲಿ ಮಾಡಿದಂತೆ ಮನೆ ಮಂದಿಗೆ ಮುಂದಿನ ದಿನಗಳಲ್ಲಿ ಬಿಗ್‌ಬಾಸ್‌ ಯಾವ ರೀತಿಯ ಆಘಾತಕಾರಿ ಮಾಹಿತಿ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು.

ನಾವು ಮಾಡಿದ್ದೇ ರೂಲ್ಸು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ದರ ನಿರ್ಧಾರ ತಮ್ಮದು ಎಂದು ಹೇಳುತ್ತಿರುವುದಲ್ಲದೇ ಪಾತ್ರಗಳನ್ನು ಅದಲು ಬದಲು ಮಾಡಿದ್ದಾರೆ.