ಎರಡೆರಡು ಲವ್ ಸ್ಟೋರಿ..‘ಚಿನ್ನು’ ಜತೆಯೇ ಡೀಲ್ ಮಾಡಿಕೊಂಡವರು ಯಾರು?

First Published 19, Nov 2018, 11:00 PM IST
bigg-boss-kannada-season-6- Day 29 Highlights
Highlights

ಬಿಗ್ ಬಾಸ್ ಆಟ ಮತ್ತಷ್ಟು ಗಟ್ಟಿಯಾಗಿದೆ. ಸ್ಪರ್ಧಿಗಳ ನಡುವೆ ಒಳಗೊಳಗೆ ಕುದಿಯುವ ಮನಸ್ಸಿದ್ದರೂ ಹೊರಗೆ ಸ್ನೇಹದ  ಮಾತನಾಡುತ್ತಿದ್ದಾರೆ. ಇದೆಲ್ಲದರ ನಡುವೆ ಸೋಮವಾರವೇ ನಾಮಿನೇಶನ್ ಪ್ರಕ್ರಿಯೆ ಮುಗಿದಿದೆ. ಹಾಗಾದರೆ ಯಾರು ನಾಮಿನೇಶನ್ ಗೆ ಗುರಿಯಾದರು?

ಇಬ್ಬರು ಸ್ಪರ್ಧಿಗಳನ್ನು ಒಟ್ಟಿಗೆ ಕರೆದು ಇಬ್ಬರಲ್ಲಿ ಒಬ್ಬರನ್ನು ಅವರೆ ಕೂತು ಮಾತನಾಡಿ ನಾಮಿನೇಶನ್ ಮಾಡಲು ಬಿಗ್ ಬಾಸ್ ಆದೇಶ ನೀಡಿದರು. ಅದರಂತೆ ಬಿಗ್ ಬಾಸ್ ಜೋಡಿಗಳನ್ನು ಕರೆದರು. ಇದಕ್ಕೂ ಮುನ್ನ ಮನೆಯ ನಾಯಕ ಶಶಿ ಆಯ್ಕೆ ಮಾಡಿ ಆನಂದ್ ಅವರನ್ನು ಈ ವಾರದ ನಾಮಿನೇಶನ್ ನಿಂದ ಸೇವ್ ಮಾಡಿದರು.

ನಾಮಿನೇಶನ್ ಗೆ ಆ್ಯಂಡಿ ಮತ್ತು ಕವಿತಾ ಅವರನ್ನು ಬಿಗ್ ಬಾಸ್ ಒಟ್ಟಿಗೆ ಕರೆದಿದ್ದರು. ಮೊದಲನೆ ಸಾರಿ ಯಾರನ್ನು ಸೂಚಿಸಬೇಕು ಎಂದು ತೀರ್ಮಾನಕ್ಕೆ ಬರಲು ಇಬ್ಬರು ವಿಫಲರಾಗಿ ನಂತರ ಮತ್ತೊಂದು ಅವಕಾಶ ಪಡೆದುಕೊಂಡರು. ಆದರೆ ಇಬ್ಬರ ನಡುವೆ ಒಂದು ಡೀಲ್ ಆಯಿತು. ಕವಿತಾ ಪ್ರತಿ ದಿನ 10 ನಿಮಿಷ ಆ್ಯಂಡಿ ಜತೆ ಮಾತಾಡಬೇಕು ಎಂಬ ಡೀಲ್ ಕುದುರಿತು. 

ಆ್ಯಂಡಿ ಕವಿತಾಳನ್ನು ಪ್ರೀತಿಸುತ್ತಿದ್ದೇನೆ ಎಂಬ ವರ್ತನೆ ತೋರಿದರೆ ಕವಿತಾ 10 ನಿಮಿಷ ಟೈಂಪಾಸ್ ಎಂದು ಜಯಶ್ರೀ ಬಳಿ ಹೇಳಿಕೊಂಡರು. ಮಿನ್ನೊಂದು ಕಡೆ ರಾಕೇಶ್ ಮತ್ತು ಅಕ್ಷತಾ ಕನ್ಫೆಶನ್ ರೂಂ ನಲ್ಲಿ ಒಬ್ಬರಿಗಾಗಿ ಒಬ್ಬರು ತ್ಯಾಗ ಮಾಡುವ ರೀತಿ ಆಡಿದರು. ಇಬ್ಬರು ಕಣ್ಣೀರು ಸುರಿಸುತ್ತಾ ಒಬ್ಬರನ್ನೊಬ್ಬರು ಅಪ್ಪಿಕೊಂಡು ಸಂತೈಸಿದರು.ರಶ್ಮಿ, ಧನರಾಜ್‌, ಅಕ್ಷತಾ, ರವಿ, ಆಂಡಿ, ಮುರಳಿ ಮನೆಯೊಂದ ಹೊರ ಹೋಗಲು ನಾಮಿನೇಟ್‌ ಆದರು. ನಂತರ ಬಿಗ್‌ ಬಾಸ್‌ ನೀಡಿದ ಮುಖ್ಯಮಂತ್ರಿ ಟಾಸ್ಕ್‌ನಲ್ಲಿ ಸ್ಪರ್ಧಿಗಳು ತಮ್ಮ ಯೋಜನೆಗಳನ್ನು ಪ್ರಸ್ತುತ ಮಾಡಿದರು. ಮುರುಳಿ ಈ ಟಾಸ್ಕ್ ನಲ್ಲಿ ಉತ್ತಮ ಭಾಷಣ ಮಾಡಿ ಬಿಗ್ ಬಾಸ್ ನೀಡುವ ಉಡುಗೊರೆಗೆ ಪಾತ್ರವಾದರು.

loader