ಬಿಗ್‌ಬಾಸ್ ಮನೆಯಲ್ಲಿ ವಾದ-ವಿವಾದ, ಮಾತು-ಗಲಾಟೆ  ಎಲ್ಲವೂ ಜೋರಾಗಿ ನಡೆಯುತ್ತಲೇ ಇದೆ. ಆದರೆ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡು ಹೊರಬಂದಿದ್ದ ಸ್ನೇಹಾ ಆಚಾರ್ಯ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬಿಗ್ ಬಾಸ್‌ಗೆ ಕಾಲಿಡುವ ಮುನ್ನವೇ ಸ್ನೇಹಾ ಆಚಾರ್ಯ ಮದುವೆ ನಿಕ್ಕಿ ಮಾಡಿಕೊಂಡಿದ್ದರು. ಆದರೆ ಸಿಕ್ಕ ಅವಕಾಶ ಕೈ ಚೆಲ್ಲಲು ಮನಸ್ಸು ಮಾಡದ ಸ್ನೇಹ ಬಿಗ್‌ ಬಾಸ್‌ಗೆ ಬಂದಿದ್ದರು. ಅಮೆರಿಕದ ರಾಯನ್ ಎಂಬುವರ ಜತೆ ಸ್ನೇಹ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ನ್ಯೂಯಾರ್ಕ್‍ನ ರಾಯನ್ ಕೊಪ್ಕೊ ಹಾಗೂ ಸ್ನೇಹ ನಡುವೆ ಪ್ರೇಮಾಂಕುರವಾಗಿದ್ದು, ನವೆಂಬರ್ 25ರಂದು ಮದುವೆಯಾಗಿದ್ದಾರೆ. ಮೈಸೂರು ರಸ್ತೆಯಲ್ಲಿರುವ ಎಂ. ಸಿರಿ ಕನ್ವೆನ್ಷನ್ ಹಾಲ್'ನಲ್ಲಿ ಎರಡೂ ಕುಟುಂಬಸ್ಥರ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹ ನೆರವೇರಿದೆ. ಸ್ನೇಹ ತಮ್ಮ ಭಾವಿ ಪತಿ ಅಂದರೆ ಈಗ ಮದುವೆಯಾಗಿರುವ ರಾಯನ್ ಅವರನ್ನು ಬಿಗ್‌ಬಾಸ್ ವೇದಿಕೆಗೆ ಕರೆದುಕೊಂಡು ಬಂದಿದ್ದರು.

View post on Instagram
View post on Instagram