ಬಿಎಂಟಿಸಿ ಚಾಲಕರಾಗಿ ಮನೆ ಪ್ರವೇಶ ಪಡೆದಿದ್ದ ಆನಂದ್ ತಮ್ಮ ವಿಭಿನ್ನ ಮ್ಯಾನರಿಸಂನಿಂದ ಗುರುತಿಸಿಕೊಂಡಿದ್ದರು. ಮಸಿ ಬಳಿಯುವ ಟಾಸ್ಕ್ ನಲ್ಲಿ ದೊಡ್ಡ ನಾಮಿನೇಶನ್‌ನಿಂದ ಪಾರಾದ ಆ್ಯಂಡಿ ಮುಂದಿನ ವಾರಕ್ಕೆ ತಮ್ಮ ಆಟ ಕಾಯ್ದುಕೊಂಡರು.

ವಾರದ ಕತೆ ಕಿಚ್ಚನ ಜತೆಯಲ್ಲಿ ಈ ವಾರ ಮತ್ತು ಕಳೇದ ವಾರದ ಕೆಲವು ಘಟನಾವಳಿಗಳ ಚರ್ಚೆ ಮತ್ತು ಪರಾಮರ್ಶೆ ಆದವು.  ಗಂಡ ಹೆಂಡತಿ ಹೇಳಿಕೆ, ಆ್ಯಂಡಿ ಪಾಯಸಕ್ಕೆ ಮೆಣಸಿನ ಪುಡಿ ಹಾಕಿದ್ದು ಎಲ್ಲವನ್ನು ಸುದೀಪ್ ನಿಭಾಯಿಸಿದರು.

ಇಲ್ಲಿಗೆ ಬಿಗ್‌ ಬಾಸ್ ಮನೆ 41 ದಿನ ಮುಗಿಸಿದೆ. ಕನ್ನಡಿಗರನ್ನು ಅಂಬರೀಶ್ ಅಗಲಿದ ವಿಚಾರ ಮನೆ ಒಳಗಿನ ಮಂದಿಗೆ ಗೊತ್ತಿರಲಿಲ್ಲ. ಆದರೆ ಬಿಗ್ ಬಾಸ್ ಇಂದು ಆ ವಿಚಾರ ತಿಳಿಸಿದರು.  ಮನೆ ಮಂದಿಯೆಲ್ಲ ಭಾವುಕರಾದರು.