ಮನೆಯಿಂದ ಕಳಿಸಿಬಿಡಿ ಎಂದು ನಾನು ಕನ್ಫೆಶನ್ ರೂಂಗೆ ಹೋಗುವ ತೀರ್ಮಾನ ಮಾಡಿದ್ದೆ. ನಮ್ಮ ಅಮ್ಮ ಕೂಡ ಅದೇ ಮಾತು ಹೇಳಿದ್ದರು ಎಂದು ಅಕ್ಷತಾ ಆ್ಯಂಡಿ ಬಳಿ ಅಳಲು ತೋಡಿಕೊಂಡರು.

ಒಟ್ಟಿನಲ್ಲಿ ರಾಕೇಶ್‌, ಶಶಿ, ಅಕ್ಷತಾ, ಕವಿತಾ, ಜಯಶ್ರೀ, ನಯನಾ, ಧನರಾಜ್‌ ನಾಮಿಮೇಟ್ ಆದರು. ನಂತರ ಉತ್ತಮರು, ಅಧಮರು ಎಂಬುದನ್ನು ನಿರ್ಧರಿಸಲು ಬಿಗ್‌ ಬಾಸ್‌ ತಿಳಿಸಿದ್ದು, ಸ್ಪರ್ಧಿಗಳು ಖುಷಿಯಿಂದಲೇ ಆಡಿದರು.

'ಮುಂಗಾರು ಮಳೆ' ಸುದೀಪ್ ಮಾಡಿದ್ದರೆ ಏನಾಗುತ್ತಿತ್ತು? ಕಿಚ್ಚ ಹೇಳಿದ ಉತ್ತರ

ಈ ಮಧ್ಯೆ ನಾಮಿನೇಶನ್‌ಗೆ ಗುರಿಯಾದವರು ಈಜುಕೋಳದಲ್ಲಿ ಮುಳುಗಿ ಎದ್ದರು. ಇತ್ತ ನಾಮಿನೇಶನ್‌ಗೆ ಗುರಿಯಾದವರು ಈಗ ಆ್ಯಕ್ಟೀವ್‌ ಆಗಿದ್ದಾರೆ ಎಂದು ಆ್ಯಂಡಿ ಟಾಂಗ್ ಕೊಟ್ಟರು. ಒಟ್ಟಿನಲ್ಲಿ ಮನೆಯ ಒಳಗಿನ ಗ್ರೂಪ್‌ಗಳಿಂದ ಅತ್ತಲ್ಲೂ ಇಲ್ಲದ ಇತ್ತಲೂ ಇಲ್ಲದ ಆ್ಯಂಡಿ, ನಯನಾ ಮತ್ತು ಮುರಳಿ ಅವರಿಗೆ ಲಾಭ ಆಗುತ್ತಿರುವುದೆಂತೂ ಸತ್ಯ..