ಪ್ರತೀ ಸ್ಪರ್ಧಿ ಹಿಂದೆ ಒಂದೊಂದು ಕಥೆ

ನಟನೆ ಕಡೆ ಆಸಕ್ತಿ ಹೊಂದಿದ್ದ ಜಯಶ್ರೀ 8 ಕ್ಲಾಸ್ ನಲ್ಲೇ ಸೀತಾರಾಮ್ ನಿರ್ದೇಶನದ ಮಾಯಾಮೃಗ ಧಾರವಾಹಿಯಲ್ಲಿ ಅಭಿನಯಿಸಿದ್ದಾರೆ. ಅಲ್ಲಿಂದ ಶುರುವಾದ ಪಯಣ ಇಂದಿಗು ಶಾಶ್ವತವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ 21 ವರ್ಷಗಳಿಂದ ಕಿರುತೆರೆ ಹಾಗು ಬೆಳ್ಳಿ ತೆರೆ ಮೇಲೆ ಸಾಕಷ್ಟು ಪಾತ್ರ ಮಾಡಿದ್ದಾರೆ. ಚಿಕ್ಕವಯಸ್ಸಿನಲ್ಲೇ ವಿವಾಹ ಬಂಧನಕ್ಕೆ ಒಳಗಾದ ಇವರಿಗೆ 9ನೇ ತರಗತಿ ಓದುತ್ತಿರುವ ಮಗಳಿದ್ದಾರೆ. ಪಂಚ ಪ್ರಾಣವಾದ ಮಗಳನ್ನು ಬಿಟ್ಟು ಇಲ್ಲಿ ಎಷ್ಟು ದಿನ ಇರುವರೆಂದು ಕಾದು ನೋಡಬೇಕು.

ಮದುವೆಯಾದ ನಂತರ ನಟನೆ ಬಿಟ್ಟು ಅಮೆರಿಕಾದತ್ತ ಮುಖಮಾಡಿದ್ದ ಜಯಶ್ರೀ ಮತ್ತೆ ಭಾರತಕ್ಕೆ ಮರಳಿದರು. ತಂದೆಯನ್ನು ಕಳೆದುಕೊಂಡ ದುಃಖ ಒಂದು ಕಡೆಯಾದರೆ ಇನ್ನೊಂದು ಕಡೆ ಸಂಸಾರವನ್ನು ಬಿಟ್ಟು 100 ದಿನ ಕಳೆಯುವುದು. ಇದರಿಂದ ಬಿಗ್ ಬಾಸ್ ಮನೆಯಲ್ಲಿ ಎಷ್ಟು ದಿನ ಇರುತ್ತಾರೆ ಎಂದು ಕಾದು ನೋಡಬೇಕು.