ಪಕ್ಕದ್ಮನೆ ಹುಡುಗಿ ಇಮೇಜ್‌ ಸಾಕಾಯಿತು: ಜಯಶ್ರೀ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 9, Feb 2019, 12:44 PM IST
Bigg Boss Jayashree bold PhotoShoot for new projects
Highlights

ಬಿಗ್‌ಬಾಸ್‌ ಖ್ಯಾತಿಯ ನಟಿಯ ಹಾಟ್‌ ಫೋಟೋಶೂಟ್‌

ಬಿಗ್‌ಬಾಸ್‌ ಖ್ಯಾತಿಯ ಜಯಶ್ರೀ ರಾಮಯ್ಯ ಈಗ ಹೊಸ ಅವತಾರದೊಂದಿಗೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಆಗಲು ಮುಂದಾಗಿದ್ದಾರೆ. ಸಕತ್‌ ಹಾಟ್‌ ಮಗಾ ಅಂತ ಪಡ್ಡೆ ಹುಡುಗರು ಹುಬೇರಿಸುವಷ್ಟುಬೋಲ್ಡ್‌ ಲುಕ್‌ನಲ್ಲೊಂದು ಫೋಟೋಶೂಟ್‌ ಮಾಡಿಸಿದ್ದು, ಸಹಜವಾಗಿಯೇ ಗಾಂಧಿನಗರದ ಚಿತ್ತ ಅವರತ್ತ ಎನ್ನುವಂತೆ ಮಾಡಿದೆ.

‘ಇದು ಯಾವುದೋ ಸಿನಿಮಾದ ಲುಕ್‌ ಅಲ್ಲ. ನನ್ನದೇ ಪ್ರೊಫೈಲ್‌ಗೆ ಒಂದಿಷ್ಟುಫೋಟೋ ಬೇಕು ಅಂತ ಈ ತರಹದ ಫೋಟೋ ಶೂಟ್‌ ಮಾಡಿಸಿದೆ. ನನ್ನನ್ನು ಕ್ಯೂಟ್‌ ಹುಡುಗಿ, ಪಕ್ಕದ್ಮನೆ ಹುಡುಗಿ ಅಂತಿದ್ರೇ ಹೊರತು, ಜಯಶ್ರೀ ಬೋಲ್ಡ್‌ ಪಾತ್ರಗಳಿಗೂ ಸೈ ಅಂತ ಎಂದಿಗೂ ಪರಿಗಣಿಸಿರಲಿಲ್ಲ. ಹಾಗಾಗಿ ಈ ಫೋಟೋಶೂಟ್‌ ಮಾಡಿಸಿದೆ. ಫೋಟೋಗ್ರಾಫರ್‌ ಪಾವೆಂದನ್‌ ಕಾನ್ಸೆಪ್ಟ್‌ ಫೋಟೋ ಇದು. ಕಲಾವಿದೆಯಾಗಿ ಒಂದು ಪಾತ್ರಕ್ಕೆ ಅಗತ್ಯಕ್ಕೆ ತಕ್ಕಂತೆ ಅಭಿನಯಿಸಲು ನಾನು ಸಿದ್ಧ ಎನ್ನುವುದು ನಿಜ. ಆದರೆ ನನ್ನದೇ ಇತಿ ಮಿತಿಗಳಾಚೆ ಬೋಲ್ಡ್‌ ನಟಿ ಅಂತೆಲ್ಲ ಕರೆಸಿಕೊಳ್ಳಲು ಇಚ್ಚಿಸುವುದಿಲ್ಲ. ಅದು ಬೇಕಾಗಿಯೂ ಇಲ್ಲ’ ಎನ್ನುತ್ತಾರೆ ಜಯಶ್ರೀ.

ಸದ್ಯ ಅವರು ಆಲ್ಬಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದು ರಾರ‍ಯಪ್‌ ಮತ್ತು ಟಪ್ಪಾಂಗುಚಿ ಮಿಶ್ರಣದ ಒಂದು ಬಗೆಯ ಪಕ್ಕಾ ಕನ್ನಡದ ಹಾಡು. ವಿಕ್ರಮ್‌ ಯೋಗಾನಂದ್‌ ಅದರ ನಿರ್ದೇಶಕ. ಹೆಸರು ‘ಒಳ್ಳೆಯದ್ರಲ್ಲಪ್ಪೊ..’ ಅಂತ.

loader