ಬಿಗ್ ಬಾಸ್ ಸೀಸನ್- 5 ಆ್ಯಂಗ್ರಿ ಯಂಗ್ ಮ್ಯಾನ್ ಜಗನ್ನಾಥ್ ಜನವರಿ 28 ರಂದು ಆಪ್ತ ಬಳಗದೊಂದಿದೆ ಆರತಕ್ಷತೆ ಕಾರ್ಯಕ್ರಮ ಮಾಡಿಕೊಂಡಿದ್ದರು. ಇಂದು ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್‌ ರೋಡ್‌ನಲ್ಲಿರುವ ಕನ್ವೆಂಷನ್ ಹಾಲ್‌ನಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿದೆ.

ಮೇ 20 ರಂದು ಅರಿಶಿಣ ಶಾಸ್ತ್ರ ಕಾರ್ಯಕ್ರಮ ನಡೆದಿತ್ತು. ಹಾಗೂ ಮೇ 22 ರಂದು ಸಂಗೀತಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇನ್ನು ಸಿನಿ ಸ್ನೇಹಿತರಿಗೆ ಹಾಗೂ ಕಿರುತೆರೆ ಕುಟುಂಬಕ್ಕೆ ಮೇ 26 ರಂದು ವಿಜೃಂಭಣೆಯಾಗಿ ರಿಸೆಪ್ಷನ್ ನಡೆಯಲಿದೆ.

’ಸೀತಾವಲ್ಲಭ’ ನಿಗೆ ರಿಯಲ್ ಲೈಫ್‌ನಲ್ಲಿ ಸಿಕ್ಕಳು ಸೀತೆ!

ರಕ್ಷಿತಾ ಮುನಿಯಪ್ಪ ದುಬೈ ಕಾಲೇಜ್‌ವೊಂದರಲ್ಲಿ ಫ್ಯಾಷನ್ ಡಿಸೈನಿಂಗ್ ವ್ಯಾಸಂಗ ಮಾಡಿದ್ದು ಇವರಿಬ್ಬರು ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು.