ಸುದೀಪ್‌ ಬಾತ್‌ ರೂಮ್ ವಿಷಯವನ್ನ ಚರ್ಚಿಸಿದ ನಂತರ ಭುವನ್'ನನ್ನು ಮನೆ ಮಂದಿ ಕಿಚ್ಚಾಯಿಸಿದ್ದು, ಇದರಿಂದ ಭುವನ್ ಗೆಳತಿ ಸಂಜನಾ ಮೇಲೆ ಕೂಗಾಡಿದ್ದಾನೆ.
ಬೆಂಗಳೂರು(ನ.21): ಬಿಗ್ ಬಾಸ್ ಮನೆಯಲ್ಲಿ ಸದ್ಯ ಬಾತ್ ರೂಮ್ ಸಂಬಂಧಿಸಿದ್ದೇ ಮಾತುಕತೆ. ಏಕೆಂದರೆ ವಾರದ ಕಥೆ ಹೇಳಲು ಬಂದ ಕಿಚ್ಚ ಸುದೀಪ್ ಮನೆ ಮಂದಿ ತಲೆಯಲ್ಲಿ ಈ ಬಾತ್ ರೂಮ್ ಹುಳವನ್ನು ಬಿಟ್ಟಿದ್ದಾರೆ. ಸುಮ್ಮನಿದ್ದ ಭುವನ್ ಸದ್ಯ ಸಿರಿಯಸ್ ಆಗಿದ್ದು, ಸಂಜನಾ ಸಹ ಸಿಟ್ಟಾಗಿದ್ದಾರೆ.
ಸುದೀಪ್ ಬಾತ್ ರೂಮ್ ವಿಷಯವನ್ನ ಚರ್ಚಿಸಿದ ನಂತರ ಭುವನ್'ನನ್ನು ಮನೆ ಮಂದಿ ಕಿಚ್ಚಾಯಿಸಿದ್ದು, ಇದರಿಂದ ಭುವನ್ ಗೆಳತಿ ಸಂಜನಾ ಮೇಲೆ ಕೂಗಾಡಿದ್ದಾನೆ. ಕಿಚ್ಚ ಈ ವಿಷಯವನ್ನು ಚರ್ಚೆಸಿದ ಸಂದರ್ಭದಲ್ಲಿ ಭುವನ್ ಮತ್ತು ಸಂಜನಾ ಸರಿಯಾಗಿ ಉತ್ತರ ನೀಡದೆ ಇದ್ದದು ಇದಕ್ಕೆಲ್ಲ ಕಾರಣವಾಗಿದೆ.
ಭುವನ್-ಸಂಜನಾ ನಡುವೆ ಪ್ರಥಮ್ ಬಂದಿದ್ದೇ ಇದಕ್ಕೆಲ್ಲ ಕಾರಣವಾಗಿದ್ದು, ಭುವನ್-ಸಂಜನಾ ಬಾಗಿಲನ್ನ ಹಾಕಿಕೊಂಡು ಬಾತ್ರೂಂ ತೊಳೆಯುತ್ತಿದ್ದದ್ದನ್ನ ಪ್ರಥಮ್ ನೋಡಿ ಅದಕ್ಕೆ ರೆಕ್ಕೆ-ಪುಕ್ಕ ಬರುವಂತೆ ಮಾಡಿದ್ದಾರೆ ಎನ್ನಲಾಗಿದೆ.
.
