ಬಿಗ್ ಬಾಸ್ ಸೀಸನ್ 6 ವಿನ್ನರ್ ಶಶಿ ಕುಮಾರ್ ತನ್ನ ಬಹುವರ್ಷಗಳ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಅದುವೇ ತಾನು ವ್ಯಾಸಂಗ ಮಾಡುತ್ತಿದ್ದ ಶಾಲೆಯ ಮಕ್ಕಳನ್ನು ದತ್ತು ಪಡೆದು ಅವರ ಸಂಪೂರ್ಣ ಜವಾಬ್ದಾರಿ ಪಡೆದಿದ್ದಾರೆ.

ಆಧುನಿಕ ರೈತ ಮಾತ್ರವಲ್ಲದೆ ಕಿರುತೆರೆಯಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡು ಆ ನಂತರ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ವಿನ್ನರ್ ಆದ ಶಶಿ ಈಗ ಸಿನಿಮಾ ಕ್ಷೇತ್ರದಲ್ಲೂ ಬ್ಯುಸಿ ಆಗಿದ್ದಾರೆ.

ಶಶಿ ಕುಮಾರ್ ಮೂಲತಃ ಚಿಂತಾಮಣಿಯ ಹುಡುಗ. ಆಡಿ ಓದಿ ಬೆಳೆದ ಊರಿನಲ್ಲಿರುವ ವಿ.ವಿ.ಎಸ್ ಶಾಲೆಯಲ್ಲಿರುವ 28 ಮಕ್ಕಳನ್ನು ದತ್ತು ಪಡೆದು ಅವರ ವಿಧ್ಯಾಭ್ಯಾಸ, ಯೂನಿಫಾರ್ಮ್ ಹಾಗೂ ಇನ್ನಿತರ ಖರ್ಚುಗಳ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಭವಿಷ್ಯದಲ್ಲಿ ಇನ್ನು ಹೆಚ್ಚು ಮಕ್ಕಳನ್ನು ದತ್ತು ಪಡೆದು ಶಾಲೆಯ ಋಣ ತೀರಿಸಬೇಕು ಎಂಬುದು ಶಶಿ ಅವರ ಆಸೆ. ಸದ್ಯಕ್ಕೆ ಶಶಿ ಕುಮಾರ್ ಅಭಿನಯದ ಸಿನಿಮಾ ‘ಕೌಸಲ್ಯ ಕಲ್ಯಾಣ’ ರಿಲೀಸ್ ಆಗಲು ರೆಡಿಯಾಗಿದೆ.

 

 
 
 
 
 
 
 
 
 
 
 
 
 

Happy to adopt these 28 kids until they complete their schooling and listen to their dreams.

A post shared by Shashi Kumar (@shashi.official) on Mar 25, 2019 at 7:03am PDT