ಈ ಟ್ಯಾಟೂ ಕ್ರೇಜ್ ಇಂದಿನ ಯುವಜನರನ್ನು ಅಂಟಿಕೊಂಡಿದೆ. ವಿಭಿನ್ನವಾಗಿ ಕಾಣಲಿ, ಆಕರ್ಷಣೆ ಇರಲಿ.. ಬೇರೆಯವರ ಗಮನ ನಮ್ಮತ್ತ ಸೆಳೆಯೊಣ.. ಹೀಗೆ ಹಲವಾರು ಕಾರಣಗಳಿಂದ ಟ್ಯಾಟೊ ಹಿಂದೆ ಬಿದ್ದವರಿದ್ದಾರೆ.  ದೇಹದ ಎಲ್ಲೆಲ್ಲಿಯೋ ಈ ಹಚ್ಚೆ ಹಾಕಿಸಿಕೊಳ್ಳುವವರಿಗೆ ಕೊರತೆ ಇಲ್ಲ ಬಿಡಿ.. ಈ ಟ್ಯಾಟೊ ಕಾರಣಕ್ಕೆ  ನಟಿಯೊಬ್ಬರು ಸುದ್ದಿ ಮಾಡಿದ್ದಾರೆ.

ಹೈದರಾಬಾದ್[ಆ. 01] ನಟಿಯೊಬ್ಬರು ಎದೆಯ ಪಕ್ಕದಲ್ಲಿ ತೆಲುಗಿನ ಸ್ಟಾರ್ ನಟ ಪವನ್ ಕಲ್ಯಾಣ್ ಅವರ ಹೆಸರಿನ ಟ್ಯಾಟೂ ಬರೆಸಿಕೊಂಡಿರುವ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಬಿಗ್ ಬಾಸ್ ಮನೆಯಲ್ಲಿರುವ ನಟಿ ಆಶು ರೆಡ್ಡಿ ಟ್ಯಾಟೂದ ಒಡತಿ. ಆಶು ರೆಡ್ಡಿ ಎಂದೋ ಶೇರ್ ಮಾಡಿದ್ದ ಪೋಟೋಕ್ಕೆ ಬಿಗ್ ಬಾಸ್ ಕಾರಣದಿಂದ ವೈರಲ್ ಭಾಗ್ಯ ಸಿಕ್ಕಿದೆ.

ಕಿರುತೆರೆ ನಟಿಯ ಟಾಪ್ ಲೆಸ್ ಯೋಗ!

ಡಬ್ ಸ್ಮಾಶ್ ಮೂಲಕ ಫೇಮಸ್ ಆಗಿರುವ ಆಶು ರೆಡ್ಡಿ ಚಲ್ ಮೋಹನ ರಂಗಾ ಚಿತ್ರದ ಮೂಲಕ ಟಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದರು. ಜೂನಿಯರ್ ಸಮಂತಾ ಎಂದೇ ಕರೆಸಿಕೊಳ್ಳುವ ನಟಿಗೆ ಈಗ ಸಖತ್ ಪ್ರಚಾರ ಸಿಗುತ್ತಿದೆ.

Scroll to load tweet…