ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಪ್ರೇಮ ಪ್ರಕರಣ ಯಾರಿಗೆ ತಾನೆ ಗೊತ್ತಿಲ್ಲ. ಅಂಥದ್ದೇ ಒಂದು ಕಹಾನಿಗೆ ಹಿಂದಿಯ ಬಿಗ್ ಬಾಸ್ ಸೀಸನ್ 12 ಸಾಕ್ಷಿಯಾಗುತ್ತಿದೆ. ಇಲ್ಲಿ ಗುರು೦ಶಿಷ್ಯೆಯ ಸಮಾಗಮ. 65 ವರ್ಷದ ಗುರು ಮತ್ತು 28 ವರ್ಷದ ಶಿಷ್ಯೆಯ ಇದೊಂಥರಾ ಪ್ರೇಮ್ ಕಹಾನಿ.... ಟ್ವಿಟರ್ ನಲ್ಲಿಯೂ ಜನ ಸಖತ್ತಾಗೆ ಕಮೆಂಟ್ ಕೊಟ್ಟಿದ್ದಾರೆ.
ಮುಂಬೈ[ಸೆ.17] ವಿಚಿತ್ರ ಜೋಡಿ ಹಾಗೂ ವಿಚಿತ್ರ ಘಟನೆಗಳಿಂದಲೇ ಸುದ್ದಿ ಮಾಡುವ ಹಿಂದಿ ಬಿಗ್ ಬಾಸ್ ನ 12ನೇ ಆವೃತ್ತಿ ಭಾನುವಾರ ಆರಂಭವಾಗಿದ್ದು, ಈ ಬಾರಿ ಗುರು - ಶಿಷ್ಯೆಯ ವಿಚಿತ್ರ ಜೋಡಿಯೊಂದು ಎಂಟ್ರಿಕೊಟ್ಟಿದ್ದು ಇದೊಂಥರಾ ಸಿನಿಮಾ ರೀತಿಯ ಪ್ರೇಮ್ ಕಹಾನಿ.
'ಭಜನೆಗಳ ಸಾಮ್ರಾಟ' ಎಂದು ಹೆಸರಾಗಿರುವ 65 ವರ್ಷದ ಅನೂಪ್ ಜಲೋಟ ಅವರು ತಮ್ಮ ಶಿಷ್ಯೆ 28 ವರ್ಷದ ಜಸ್ಲೀನ್ ಮಥಾರು ಅವರೊಂದಿಗೆ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಇವರು ಬರೀ ಗುರು ಶಿಷ್ಯೆಯರಲ್ಲ ಇವರಿಬ್ಬರ ನಡುವೆ ಮೂರು ವರ್ಷಗಳಿಂದ ಅಫೇರ್ ಇದೆ!
ಸಾಮಾಜಿಕ ಜಾಲತಾಣಿಗರ ಕೈಗೆ ಇಂಥ ಸುದ್ದಿ ಸಿಕ್ಕರೆ ಸುಮ್ಮನಾಗುತ್ತಾರೆಯೇ... ಸಖತ್ತಾಗೆ ಜನ್ಮ ಜಾಲಾಡಿದ್ದಾರೆ.
