ಬಿಗ್'ಬಾಸ್ ಸ್ಪರ್ಧಿಯ ಮದುವೆ ಸಂಭ್ರಮ

First Published 20, Feb 2018, 4:23 PM IST
Bigg Boss 10 contestant Gaurav Chopra ties the knot in Delhi
Highlights

ಜನವರಿಯಲ್ಲಷ್ಟೆ ಬಿಗ್'ಬಾಸ್'ನ 11ನೇ ಆವೃತ್ತಿ ಪೂರ್ಣಗೊಂದು ಟಿವಿ ನಟಿ ಶಿಲ್ಪಾ ಶಿಂಧೆ ವಿಜೇತರಾಗಿದ್ದರು.

ಬಿಗ್'ಬಾಸ್ ಮನೆಯಲ್ಲಿ ಹಾಗೂ ಮನೆಯಿಂದ ಹೊರ ಹೋದವರ ಬಗ್ಗೆ ಏನು ನಡೆದರೂ ವೀಕ್ಷಕರಿಗೆ ಮನರಂಜನೆಯ ಸುದ್ದಿ. ಕಳೆದ ವರ್ಷ ಬಾಲಿವುಡ್ ನಟ ಸಲ್ಮಾನ್ ಖಾನ್ ನಿರೂಪಿಸಿಕೊಡುವ ಹಿಂದಿ ಆವೃತ್ತಿ ಬಿಗ್'ಬಾಸ್'ಗೂ ಕೂಡ ಹೆಚ್ಚು ವೀಕ್ಷಕರಿದ್ದಾರೆ.

ಜನವರಿಯಲ್ಲಷ್ಟೆ ಬಿಗ್'ಬಾಸ್'ನ 11ನೇ ಆವೃತ್ತಿ ಪೂರ್ಣಗೊಂದು ಟಿವಿ ನಟಿ ಶಿಲ್ಪಾ ಶಿಂಧೆ ವಿಜೇತರಾಗಿದ್ದರು. ಪ್ರಸ್ತುತ ಲೇಟೆಸ್ಟ್ ಸುದ್ದಿಯೆಂದರೆ 10ನೇ ಆವೃತ್ತಿಯ ಪ್ರಮುಖ ಸ್ಪರ್ಧಿ ಗೌರವ್ ಚೋಪ್ರಾ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಹಿಂದಿ ಟಿವಿ ಧಾರಾವಾಹಿಗಳಲ್ಲಿ ನಟಿಸುವ ಇವರು ತಮ್ಮ ಬಹುಕಾಲದ ಗೆಳತಿ ಹಿತಾಶಾ ಅವರನ್ನು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ವಿವಾಹವಾಗಿದ್ದಾರೆ. ಹಲವು ಬಾಲಿವುಡ್ ತಾರೆಗಳು ಮದುವೆ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದ್ದಾರೆ.

loader