ಸ್ಯಾಂಡಲ್'ವುಡ್ ನಟ ಶ್ರೀಮುರಳಿ ಮತ್ತು ಬ್ಲಾಕ್ ಕೋಬ್ರಾ ವಿಜಯ್ ನಡುವೆ ಸಿನಿಮಾ ವಾರ್ ಶುರುವಾಗಲಿದೆ.

ಬೆಂಗಳೂರು (ನ.06): ಸ್ಯಾಂಡಲ್'ವುಡ್ ನಟ ಶ್ರೀಮುರಳಿ ಮತ್ತು ಬ್ಲಾಕ್ ಕೋಬ್ರಾ ವಿಜಯ್ ನಡುವೆ ಸಿನಿಮಾ ವಾರ್ ಶುರುವಾಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶ್ರೀ ಮುರಳಿ ಸಾಮಾನ್ಯವಾಗಿ ಯಾರ ತಂಟೆಗೂ ಹೋಗೊಲ್ಲ. ಯಾವ ಗ್ರೂಪಿಸಂಗೂ ಸೇರಲ್ಲ ಅವ್ರದ್ದೇನಿದ್ರೂ ಯಾವಾಗ್ಲೂ ಸಿನಿಮಾದ್ದೆ ಚಿಂತೆ. ಮಫ್ತಿ ಸಿನಿಮಾಗೆ ಟ್ರೈಲರ್ ರಾಜ್ಯೋತ್ಸವದಂದು ರಿಲೀಸ್​ ಆಗಿ ಲಕ್ಷಗಟ್ಟಲೆ ವೀಕ್ಷಣೆ ಪಡೆದು ಆರ್ಭಟಿಸುತ್ತಿದೆ. ಅಭಿಮಾನಿಗಳು ಶ್ರೀಮುರಳಿ ಸೆಂಚುರಿಸ್ಟಾರ್​ ಶಿವಣ್ಣನ ನಡುವಿನ ಖದರ್ ನೊಡೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಅಷ್ಟರಲ್ಲೆ ಹೊಸದೊಂದು ನ್ಯೂಸ್ ಚರ್ಚೆಗೆ ಕಾರಣವಾಗಿದೆ. ಕನ್ನಡದ ಹಾರ್ಡ್​ವರ್ಕರ್​ ಮೊದಲ ಸಿಕ್ಸ್​ಪ್ಯಾಕ್ ಹೀರೋ ಜಂಗ್ಲೀ ಶಿವಲಿಂಗ ದುನಿಯಾವಿಜಿ. ಸದ್ಯ ದುನಿಯಾವಿಜಿ ಆರ್ ಚಂದ್ರು ನಿರ್ದೇಶನದ ಕಡಕ್ ಸಿನಿಮಾ ಕನಕದಲ್ಲಿ ಬಿಜಿಯಾಗಿದ್ದಾರೆ.

ಮಫ್ತಿ ಹಾಗೂ ಕನಕ ಸಿನಿಮಾಗಳು ಎರಡು ಚಿತ್ರಗಳು ಎರಡೂ ಚಿತ್ರಗಳು ಡಿಸೆಂಬರ್ ತಿಂಗಳಿನಲ್ಲಿ ತೆರೆ ಕಾಣಲಿವೆ. ಎರಡೂ ಆ್ಯಕ್ಷನ್ ವಿತ್ ಫ್ಯಾಮಿಲಿ ಎಂಟರ್​ಟೈನರ್ ಚಿತ್ರಗಳು. ವಿಭಿನ್ನ ಕಥೆಗಳನ್ನ ಹೊಂದಿರುವ ಈ ಸಿನಿಮಾಗಳು ಒಂದೇ ದಿನ ರಿಲೀಸ್ ಆಗೊ ಮೂಲಕ ಭಾರೀ ಚರ್ಚೆಗೆ ಗುರಿಯಾಗಿವೆ. ಎರಡು ಚಿತ್ರಗಳಲ್ಲೂ ನೀನಾ ನಾನಾ ಎಂಬ ಆರೋಗ್ಯಕರ ಸ್ಪರ್ಧೆ ಇದ್ದು ಯಾರು ಗೆಲ್ಲುತ್ತಾರೆ ಅನ್ನೋದು ವರ್ಷ್ಯಾಂತ್ಯಕ್ಕೆ ಗೊತ್ತಾಗಲಿದೆ.