ಮದುವೆ ಬಗ್ಗೆ ಮಾತನಾಡಿದ ನಿವೇದಿತಾ : ವಿವಾಹವಾಗೋದು ಯಾರನ್ನು ಗೊತ್ತಾ ?

First Published 1, Feb 2018, 7:01 PM IST
Big Boss Speak About her Marriage
Highlights

ನಿವೇದಿತಾ ಮುದ್ದು ಮಾತಿಗೆ ನೋಟಕ್ಕೆ. ಯಾವ್ ಹುಡ್ಗ ಬೀಳೋದಿಲ್ಲ ಹೇಳಿ. ವಯಸ್ಸು ಚಿಕ್ಕದೇನೋ ಸರಿ. ಆಕೆಯ ವಯಸ್ಸಿನ ಹುಡುಗರಿಗೆ ಈಕೆ ಅತಿದೊಡ್ಡ ಕ್ರಶ್ ಬೇಡ. ಅದಕ್ಕೇನೆ ಚೆಲುವೆಗೆ ಪ್ರೇಮ ನಿವೇದನಗೆಳು ಹೆಚ್ಚು ಹೆಚ್ಚು ಬರ್ತಿವೆ.

ಕರ್ನಾಟಕದ ಬೊಂಬೆ. ಬಿಗ್ ಬಾಸ್ ಮನೆಯ ಡಾಲ್. ಈ ಜೀವಂತ ಬೊಂಬೆ ಮುದ್ದಾಗಿ ಮಾತ್ ಆಡ್ತದೆ. ಒಮ್ಮೆ ನೋಡಿದ್ರೆ ಇನ್ನೊಮ್ಮೆ ಮುದ್ದಾಡಬೇಕೆನಿಸುತ್ತದೆ. ಅಷ್ಟು ಚೆಂದದ ಈ ಚೆಂದನವನದ ಬೊಂಬೆಯ ಮದುವೆ ಸುದ್ದಿ ಈಗ ಹರಿದಾಡುತ್ತಿದೆ. ಅದರ ಸುತ್ತ ಇನ್ನೂ ಒಂದಷ್ಟು ವಿಷಯ ಇದೆ.

ನಿವೇದಿತಾ ಗೌಡ. ಜೀವಂತ ಬೊಂಬೆ.ದೊಡ್ಮನೆಯ ದೃಷ್ಠಿ ಬೊಟ್ಟು.ಇನ್ನೂ ಹೆಚ್ಚು  ಹೇಳಬೇಕೆಂದ್ರೆ, ಚಂದನದ ಗೊಂಬೆ. ಈ ಗೊಂಬೆ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಎಲ್ಲರಿಗೂ ಈ ಹುಡುಗಿ ಇಷ್ಟ. ಮಾತು ಇನ್ನೂ ಬಲು ಇಷ್ಟ. ಅಷ್ಟು ಇಷ್ಟಪಡೋ ಈ ಹುಡಿಗಿಗೆ ಈಗ ಭಾರಿ ಬೇಡಿಕೆ.
ಹೌದು..! ನಿವೇದಿತಾ ಮುದ್ದು ಮಾತಿಗೆ ನೋಟಕ್ಕೆ. ಯಾವ್ ಹುಡ್ಗ ಬೀಳೋದಿಲ್ಲ ಹೇಳಿ. ವಯಸ್ಸು ಚಿಕ್ಕದೇನೋ ಸರಿ. ಆಕೆಯ ವಯಸ್ಸಿನ ಹುಡುಗರಿಗೆ ಈಕೆ ಅತಿದೊಡ್ಡ ಕ್ರಶ್ ಬೇಡ. ಅದಕ್ಕೇನೆ ಈ ಚೆಲುವೆಗೆ ಪ್ರೇಮ ನಿವೇದನಗೆಳು ಹೆಚ್ಚು ಹೆಚ್ಚು ಬರ್ತಿವೆ. ನಿವೇದಿತಾ ಮದುವೆ ಆದ್ರೆ ಆ ಹುಡುಗನ್ನೆ ಮದುವೆ ಆಗೋದಂತೆ. ಆ ಹುಡುಗ ಯಾರೂ ಅನ್ನೋ ಪ್ರಶ್ನೆ ನಿಮ್ಮಲ್ಲಿ ಈಗಲೇ ಮೂಡಿರಬಹುದಲ್ವ. ನಿಜ, ಅದಕ್ಕೆ ಉತ್ತರ ಇಲ್ಲಿದೆ ನೋಡಿ. ಅದು ಸಿಂಪಲ್ ಆಗಿಯೆ ಇದೆ. ತಂದೆ ಮತ್ತು ತಾಯಿ ನೋಡಿರೋ ಹುಡುಗನನ್ನೆ ನಿವೇದಿತಾ ಮದುವೆ ಆಗ್ತಾರಂತೆ. ಅಲ್ಲಿಗೆ ಲವ್ ಮಾಡೋ ಹುಡುಗರು,ಕ್ರಶ್ ಆಗಿರೋ ಹುಡುಗರು ಸ್ವಲ್ಪ ದೂರವೇ ಉಳಿದರೆ ಚೆನ್ನ ಅನಿಸುತ್ತದೆ. ಯಾಕೆಂದ್ರೆ, ನಿವೇದಿತಾ ಲವ್ ಮ್ಯಾರೇಜ್ ಆಗೋ ಹಂಗೆ ಕಾಣ್ತಿಲ್ಲ.
ನಿವೇದಿತಾಗೆ ಚಂದನ್ ಪ್ರಪೋಸ್ ಮಾಡಿದ್ರೆ..?
ಬಿಗ್'ಬಾಸ್ ಮನೆಯಲ್ಲಿ ಚೆಂದನ್ ಮತ್ತು ನಿವೇದಿತಾ ಚೆನ್ನಾಗಿಯೇ ಆಟವಾದಿದ್ರು. ತಮ್ಮ ಉತ್ತಮ ಗೆಳೆತನಕ್ಕೂ ಹೆಸರಾಗಿದ್ದರು. ಆದರೆ, ಹೊರಗಡೆ ಬಂದಾಗ ನಿವೇದಿತಾಗೆ ಹಲವರುಪ್ರಶ್ನೆ ಕೇಳಿದ್ದಾರೆ. ಒಂದು ವೇಳೆ ಚಂದನ್ ಪ್ರಪೋಸ್ ಮಾಡಿದರೆ ಏನ್ ಮಾಡ್ತಿರೀ ಅಂತಲೂ ಕೇಳಿ ಆಗಿದೆ. ಅದಕ್ಕೆ ಬೇಬಿ ಡಾಲ್ ಉತ್ತರ ಕೂಡ ಸಿಂಪಲ್ ಆಗಿಯೇ ಇದೆ. ನಾನು ಮತ್ತು ಚೆಂದನ್ ಒಳ್ಳೆ ಫ್ರೆಂಡ್ಸ್. ಇನ್ನೂ ನನಗೆ ಇನ್ನೂ ಚಿಕ್ಕ ವಯಸ್ಸು ಅಂತ ಹೇಳಿ ಬಿಟ್ಟಿದ್ದಾರೆ.

ಕನ್ನಡದ ಗೊಂಬೆ ಮುಂದೆ ಮಾಡೋದೆನು ಗೊತ್ತಾ ?

ನಿವೇದಿತಾ ಇನ್ನೂ ಓದೋ ಹುಡುಗಿ.ಪರೀಕ್ಷೆಗೆ ತಯಾರಿ ನಡೆಸಿದ್ದಾಳೆ. ಪರೀಕ್ಷೆ ಮುಗಿದ ಮೇಲೇನೆ ಎಲ್ಲ. ರಿಯಾಲಿಟಿ ಷೋ ಇರಲಿ. ಅಭಿನಯ ಇರಲಿ. ಎಲ್ಲವೂ ಪರೀಕ್ಷೆ ನಂತರವೇ. ಏರ್ ಹಾಸ್ಟೆಸ್ ಆಗೊ ನನ್ನ ಕನಸು ಹಾಗೇ ಇದೆ. ಹಂಗೆ ನಿವೇದಿತಾ ಹೇಳಿ ಆಗಿದೆ. ಉಳಿದಂತೆ, ಪ್ರೇಮ ನಿವೇದತನೆ ಥರವೇ ನಿವೇದಿತಾಗೆ ಸಿನಿಮಾರಂಗದಿಂದಲೂ ಆಫರ್ಸ್ ಬರ್ತಿವೆ. ಯಾವುದನ್ನ ಕೈಗೆ ತೆಗೆದುಕೊಳ್ತಾರೋ ನೋಡಬೇಕು.

loader