ಮುಂದಿನ ವಾರ ಮಧ್ಯರಾತ್ರಿಯ ನಾಮಿನೇಟ್ ಇರಲಿದ್ದು ಕೀರ್ತಿ, ಶಾಲಿನಿ ಹಾಗೂ ಪ್ರಥಮ ಮೂವರಲ್ಲಿ ಒಬ್ಬರು ಹೊರಗೋಗುವ ಸಾಧ್ಯತೆಯಿದೆ. ಫಿನಾಲೆ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಯೋಜಿಸುವ ಯೋಜನೆ ಆಯೋಜಕರಾಗಿದ್ದು ಹಲವು ಖ್ಯಾತ ತಾರೆಯರು ಭಾಗವಹಿಸುವ ನಿರೀಕ್ಷೆಯಿದೆ.
ರಿಯಾಲಿಟಿ ಶೋ ಬಿಗ್ ಬಾಸ್ ಫೈನಲ್ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ. ದಿನದಿನವೂ ಹೊಸ ರೂಪು ಪಡೆಯುತ್ತಿರುವ ಕಾರ್ಯಕ್ರಮದಲ್ಲಿ ಟ್ರೋಫಿ ಯಾರ ಮಡಿಲಿಗೆ ಸೇರಲಿದೆ ಎನ್ನುವುದು ವೀಕ್ಷಕರ ಕುತೂಹಲವಾಗಿದೆ.
ಗೆಲ್ಲುವ ಪ್ರಬಲ ಸ್ಪರ್ಧಿಗಳು ಔಟಾಗಿ ಕಣದಲ್ಲಿ ಪ್ರಥಮ್, ಮಾಳವೀಕ,ಮೋಹನ್, ರೇಖಾ, ಶಾಲಿನಿ, ಕೀರ್ತಿ ಉಳಿದಿದ್ದು ಇವರಲ್ಲಿ ಮೋಹನ್ ಹಾಗೂ ಮಾಳವೀಕ ಈಗಾಗಲೇ ಫೈನಲ್ ಪ್ರವೇಶಿಸಿದ್ದಾರೆ. ಕಳದ ವಾರ ನಾಮಿನೇಟ್ ಇಲ್ಲದ ಕಾರಣ ಯಾರೊಬ್ಬರು ಹೊರಗೋಗಲಿಲ್ಲ.
ಮುಂದಿನ ವಾರ ಮಧ್ಯರಾತ್ರಿಯ ನಾಮಿನೇಟ್ ಇರಲಿದ್ದು ಕೀರ್ತಿ, ಶಾಲಿನಿ ಹಾಗೂ ಪ್ರಥಮ ಮೂವರಲ್ಲಿ ಒಬ್ಬರು ಹೊರಗೋಗುವ ಸಾಧ್ಯತೆಯಿದೆ. ಫಿನಾಲೆ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಯೋಜಿಸುವ ಯೋಜನೆ ಆಯೋಜಕರಾಗಿದ್ದು ಹಲವು ಖ್ಯಾತ ತಾರೆಯರು ಭಾಗವಹಿಸುವ ನಿರೀಕ್ಷೆಯಿದೆ.
ಕೆಲವೊಂದು ಮೂಲಗಳ ಪ್ರಕಾರ ಫಿನಾಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾಗವಹಿಸುವ ಸಾಧ್ಯತೆಯಿದೆಯಂತೆ. ಕಳೆದ ಬಾರಿಯ ಫಿನಾಲೆಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಭಾಗವಹಿಸಿದ್ದರು. ಸುದೀಪ್ ಈ ಬಾರಿ ದರ್ಶನ್ ಅವರನ್ನು ಫೈನಲ್ ಕಾರ್ಯಕ್ರಮದಲ್ಲಿ ಕರೆತಂದು ಅಚ್ಚರಿ ಮೂಡಿಸಲಿದ್ದಾರಂತೆ. ಈ ಸಂಗತಿ ವದಂತಿಯೋ ಅಥವಾ ನಿಜವಾಗಲಿದೆಯೇ ಎನ್ನುವುದನ್ನು ವೀಕ್ಷಕರು ಫಿನಾಲೆ ನೋಡಿಯೇ ತಿಳಿದುಕೊಳ್ಳಬೇಕು.