ಇದು ಸದ್ಯ ಬಿಗ್‌ಬಾಸ್ ವಲಯದಲ್ಲಿ ಕೇಳಿ ಬರುತ್ತಿರುವ ಸುದ್ದಿಯಾದರೂ ಕಲರ್ಸ್ ಸೂಪರ್ ವಾಹಿನಿ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಕಾರ್ಯಕ್ರಮ ‘ಬಿಗ್ಬಾಸ್’ಮನೆಯಿಂದ ಈಗಾಗಲೇ ಮೂವರು ಸ್ಪರ್ಧಿಗಳು ಹೊರ ಬಂದಿದ್ದಾಗಿದೆ. ಮೈಸೂರಿನ ಸುಮಾ, ಕೊಡಗಿನ ಬೆಡಗಿ ಮೇಘ, ಕಳೆದ ವಾರ ನಿರ್ದೇಶಕ ದಯಾಳ್ ಹೊರಬಂದಿದ್ದಾರೆ. ಮುಂದಿನ ಸರದಿ ಯಾರದು ಅಂತ ಗೊತ್ತಾಗುವುದಕ್ಕೆ ಇನ್ನೂ ನಾಲ್ಕೈದು ದಿನ ಕಳೆಯಬೇಕಿದೆ. ಆದರೆ ಈ ಮಧ್ಯೆ ಬಿಗ್ ಬಾಸ್ ಮನೆಯಿಂದ ಮತ್ತೊಬ್ಬ ಸ್ಪರ್ಧಿ ನಟಿ ತೇಜಸ್ವಿನಿ ಹೊರ ಬಂದಿದ್ದಾರೆ ಅನ್ನುವ ಸುದ್ದಿ ಬಂದಿದೆ.
ಹಾಗಂತ ಇದಕ್ಕೆ ಎಲಿಮಿನೇಷನ್ ಪ್ರಕ್ರಿಯೆ ಕಾರಣವಲ್ಲ. ತೇಜಸ್ವಿನಿಯನ್ನು ಅರ್ಧಕ್ಕೆ ಮನೆಯಿಂದ ಆಚೆ ಕಳಿಸಿದ್ದೂ ಅಲ್ಲ. ಕೆಲವು ವೈಯಕ್ತಿಕ ಕಾರಣಗಳಿಂದ ನಟಿ ತೇಜಸ್ವಿನಿ ಹೊರ ಬಂದಿದ್ದಾರೆಂದು ಹೇಳಲಾಗುತ್ತಿದೆ. ಇದು ಸದ್ಯ ಬಿಗ್ಬಾಸ್ ವಲಯದಲ್ಲಿ ಕೇಳಿ ಬರುತ್ತಿರುವ ಸುದ್ದಿಯಾದರೂ ಕಲರ್ಸ್ ಸೂಪರ್ ವಾಹಿನಿ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಬಲ್ಲ ಮೂಲಗಳ ಪ್ರಕಾರ ಸಂಬಂಧಿಯೊಬ್ಬರ ಅನಾರೋಗ್ಯದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ತೇಜಸ್ವಿನಿ ಹೊರಬಂದಿದ್ದಾರೆಂದು ಹೇಳಲಾಗುತ್ತಿದೆ.

