ಈಗ ಚಿಕ್ಕಕಲಸಂದ್ರದ ಮೊಬೈಲ್ ಸ್ಟೋರ್'ನಲ್ಲಿ 20 ರೂಪಾಯಿಗೆ ಥಿಯೇಟರ್ ಪ್ರಿಂಟ್ ಅನ್ನು ಕಾಪಿ ಮಾಡಿಕೊಲಾಗುತ್ತಿತ್ತು.
ಬೆಂಗಳೂರು(ಸೆ.27): ಆಕ್ಷನ್ ಪ್ರಿನ್ಸ್ ಧೃವ ಸರ್ಜಾ ಚಿತ್ರಕ್ಕೆ ಪೈರಸಿ ಕಾಟ ಹೆಚ್ಚಾಗುತ್ತಲೇ ಇದೆ. ರಿಲೀಸ್ ಆದ ಮೊದಲ ದಿನವೇ ಫೇಸ್ ಬುಕ್ ಲೈವ್ ಮಾಡಿದ ಕಥೆ ಗೊತ್ತೇ ಇದೆ. ಈಗ ಚಿಕ್ಕಕಲಸಂದ್ರದ ಮೊಬೈಲ್ ಸ್ಟೋರ್'ನಲ್ಲಿ 20 ರೂಪಾಯಿಗೆ ಥಿಯೇಟರ್ ಪ್ರಿಂಟ್ ಅನ್ನು ಕಾಪಿ ಮಾಡಿಕೊಲಾಗುತ್ತಿತ್ತು.
ಇದನ್ನು ಪತ್ತೆ ಹಚ್ಚಿದ ಧೃವನ ಫ್ಯಾನ್ಸ್ ಇಂದು ಸಂಜೆ ಅಂಡಗಿ ಮೇಲ ದಾಳಿ ಮಾಡಿದರು.ರಾಜು ಅನ್ನೋ ಅಂಗಡಿ ಮಾಲೀಕನಿಗೆ ಎಚ್ಚರಿಕೆಯನ್ನು ಕೊಟ್ಟರು. ಸಿಸ್ಟಂನಲ್ಲಿದ್ದ ಭರ್ಜರಿ ಸಿನಿಮಾ ಸೇರಿದಂತೆ ಇತರ ಚಿತ್ರಗಳನ್ನ ಡಿಲೀಟ್ ಮಾಡಿಸಿ ಮಾಧ್ಯಮದ ಮುಂದೆ ಕ್ಷಮೇನೂ ಕೇಳಿಸಿದರು. ಅಷ್ಟರಲ್ಲಿಯೇ ಸುಬ್ರಮಣ್ಯಪುರದ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ರಾಜುವನ್ನು ವಶಕ್ಕೆ ಪಡೆದಿದ್ದಾರೆ.
