ಬಾಜಿರಾವ್ ಸಿಗಲಿಲ್ಲವೆಂದು ’ಪದ್ಮಾವತಿ’ ಯನ್ನು ಕೈ ಬಿಟ್ಟ ಮಾಜಿ ವಿಶ್ವ ಸುಂದರಿ

First Published 6, Aug 2018, 12:40 PM IST
Bhansali wanted me to play Padmavati, but could not get Khilji for me says Aishwarya Rai
Highlights

ಸಂಜಯ್ ಲೀಲಾ ಬನ್ಸಾಲಿಯ ಬಾಜಿರಾವ್ ಮಸ್ತಾನಿ, ಪದ್ಮಾವತ್ ಬಾಲಿವುಡ್ ಬ್ಲಾಕ್ ಬಸ್ಟರ್ ಚಿತ್ರಗಳು. ಈ ಚಿತ್ರದ ಪದ್ಮಾವತಿ ಪಾತ್ರಕ್ಕಾಗಿ ಬನ್ಸಾಲಿ ಮೊದಲಿಗೆ ಮಾಜಿ ವಿಶ್ವ ಸುಂದರಿಯನ್ನು ಅಪ್ರೋಚ್ ಮಾಡಿದ್ದರು. ಆದರೆ ಬಾಜಿರಾವ್ ಸಿಗದೇ ಪದ್ಮಾವತಿ ಪಾತ್ರ ಕೈ ಬಿಟ್ಟರು ಮಾಜಿ ವಿಶ್ವ ಸುಂದರಿ. 

ಮುಂಬೈ (ಆ. 06): ಸಂಜಯ್ ಲೀಲಾ ಬನ್ಸಾಲಿಯ ಬ್ಲಾಕ್ ಬಸ್ಟರ್ ಚಿತ್ರ  ಪದ್ಮಾವತ್ ಚಿತ್ರ ಬಾಕ್ಸಾಫೀಸ್’ನಲ್ಲಿ ಕೊಳ್ಳೆ ಹೊಡೆದಿದೆ. ರಾಜಸ್ತಾನಿ ಸಂಪ್ರದಾಯಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ರಾಜಪೂತ ಕರ್ಣಿ ಸೇನೆ ಪ್ರತಿಭಟನೆಯನ್ನು ಮಾಡಿತ್ತು. ಇದು ಸಾಕಷ್ಟು ವಿವಾದಕ್ಕೂ ಕಾರಣವಾಯ್ತು. ಇದರ ಮಧ್ಯೆ ಒಂದು ಕುತೂಹಲಕಾರಿ ವಿಚಾರ ಹೊರ ಬಿದ್ದಿದೆ. 

ರಾಣಿ ಪದ್ಮಾವತಿ ಪಾತ್ರಕ್ಕೆ ಸಂಜಯ್ ಲೀಲಾ ಬನ್ಸಾಲಿ ಮೊದಲು ಐಶ್ವರ್ಯಾ ರೈಯನ್ನು ಆಯ್ಕೆ ಮಾಡಿದ್ದರಂತೆ. ಇದನ್ನು ಸ್ವತಃ ಐಶ್ವರ್ಯಾ ರೈ ಖಚಿತಪಡಿಸಿದ್ದಾರೆ. 

ಪದ್ಮಾವತಿ ಪಾತ್ರಕ್ಕಾಗಿ ನನ್ನನ್ನು ಅಪ್ರೋಚ್ ಮಾಡಿದ್ದರು. ಆದರೆ ನನಗೆ ಬಾಜಿರಾವ್ ಸಿಗಲಿಲ್ಲ. ಹಾಗಾಗಿ ನಾನು ಪದ್ಮಾವತಿಯಾಗಲು ಸಾಧ್ಯವಾಗಲಿಲ್ಲ ಎಂದು ಐಶ್ವರ್ಯಾ ರೈ ಹೇಳಿದ್ದಾರೆ. 

ಮೂಲಗಳ ಪ್ರಕಾರ, ಬನ್ಸಾಲಿ, ಬಾಜಿರಾವ್ ಮಸ್ತಾನಿ ಚಿತ್ರವನ್ನು   ಐಶ್ವರ್ಯಾ ರೈ ನತ್ತು ಸಲ್ಮಾನ್ ಖಾನ್ ಹಾಕಿಕೊಂಡು ಮಾಡಬೇಕೆಂದಿದ್ದರು. ಆದರೆ ಕಾರಣಾಂತರದಿಂದ ಸಾಧ್ಯವಾಗಲಿಲ್ಲ. ಕೊನೆಗೆ ರಣವೀರ್ ಮತ್ತು ದೀಪಿಕಾ ಮಾಡಬೇಕಾಯಿತು. 

loader