2019 ಜನವರಿಯಿಂದ ಡಿಸೆಂಬರ್‌ವರೆಗಿನ ಅಷ್ಟು ಮಾಸಗಳಿಗೂ ಅಕ್ಷರ್ ಅವರನ್ನು ವಿಭಿನ್ನವಾಗಿ ತೋರಿಸುವ ಫೋಟೋ ಅಲ್ಲಿದೆ. ಅಲ್ಲಿನ ಫೋಟೋಕ್ಕೆ ತಕ್ಕಂತೆ ಚಿಕ್ಕದಾದ ಟಿಪ್ಪಣಿ ಕೊಡಲಾಗಿದೆ. ಅಕ್ಷರ್ ಅವರ ಪರಿಕಲ್ಪನೆಯಲ್ಲೇ ಅದು ಹೊರ ಬಂದಿದೆ. ಇತ್ತೀಚೆಗೆ ಅದನ್ನು ಅಧಿಕೃತವಾಗಿ ಲಾಂಚ್ ಮಾಡಿದ ನಿರ್ಮಾಪಕ ಬಿ.ಕೆ. ಶ್ರೀನಿವಾಸ್ ಮತ್ತು ಅಕ್ಷರ್ ಅದರ ನಿರ್ಮಾಣದ ಕಾರಣ ಹೇಳಿಕೊಂಡರು.

‘ಸಿನಿಮಾ ಒಂದು ಕ್ರಿಯಾಶೀಲ ಜಗತ್ತು. ಇಲ್ಲಿಗೆ ನಾನು ಒಬ್ಬ ನಿರ್ಮಾಪಕನ ಮಗ ಎನ್ನುವ ಅರ್ಹತೆಯೊಂದಿಗೆ ಮಾತ್ರ ಬರುವುದಕ್ಕೆ ಇಷ್ಟ ಇಲ್ಲ. ಅಪ್ಪ ಹಣ ಹಾಕ್ತಾರೆ ನಿಜ, ಆದರೆ ನಾನು ನಟ ಅಂತ ನನ್ನದೇ ಆದ ಪ್ರತಿಭೆ ಮತ್ತು ಶ್ರದ್ಧೆಯಿಂದ ಆಗಬೇಕೆನ್ನುವುದು ನನ್ನಾಸೆ. ಆ ಕಾರಣಕ್ಕಾಗಿಯೇ ಒಂದಷ್ಟು ತರಬೇತಿ, ಸಿದ್ಧತೆ, ತಾಲೀಮು ನಡೆಸಿಯೇ ನಟನಾಗಬೇಕು ಅಂದುಕೊಂಡೆ. ಅದರ ಜತೆಗೆ ನನ್ನ ಪ್ರತಿಭೆ ಮೂಲಕ ಪರಿಚಯಿಸಿಕೊಳ್ಳಬೇಕೆನಿಸಿತು. ಅದಕ್ಕೆ ಹೊಳೆದಿದ್ದು ಇಂತಹದೊಂದು ಫೋಟೋಶೂಟ್ ಮತ್ತು ಕ್ಯಾಲೆಂಡರ್’ ಎಂದರು ಅಕ್ಷರ್.

ನಿರ್ದೇಶಕರಾದ ಸಿಂಪಲ್ ಸುನಿ ಹಾಗೂ ರಾಮಾ ರಾಮಾ ರೇ ಖ್ಯಾತಿಯ ನಿರ್ದೇಶಕ ಸತ್ಯ ಪ್ರಕಾಶ್ ಅತಿಥಿ ಆಗಿ ಬಂದಿದ್ದರು.

ನಿರ್ಮಾಪಕ ಬಿ.ಕೆ. ಶ್ರೀನಿವಾಸ್, ಕೊನೆಯಲ್ಲಿ ಸಿನಿಮಾ ಸಿದ್ಧತೆಯ ವಿವರ ಕೊಟ್ಟರು. ‘ಈ ವರ್ಷವೇ ‘ಬೆಂಕೋಶ್ರಿ ಫಿಲ್ಮ್ ಫ್ಯಾಕ್ಟರಿ’ ಮೂಲಕ ಪುತ್ರನಿಗೆ ಎರಡು ಸಿನಿಮಾ ಮಾಡುತ್ತಿದ್ದೇನೆ. ಎರಡು ಕತೆ ಕೇಳಿ ಫೈನಲ್ ಮಾಡಿದ್ದೇನೆ. ನಿರ್ದೇಶಕರು ಫೈನಲ್ ಆಗಿಲ್ಲ. ಒಬ್ಬರು ಹೊಸಬರು ಮತ್ತೊಬ್ಬರು ಅನುಭವಿ ಇದ್ದವರು ಆದರೆ ಒಳ್ಳೆಯದು ಎನ್ನುವ ಆಲೋಚನೆ ಇದೆ. ಶೀಘ್ರವೇ ಎಲ್ಲಾ ಬಹಿರಂಗ ಆಗಲಿದೆ’ ಎಂದರು.