ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್‌- 4 ನಲ್ಲಿ ಒಬ್ಬ ಲವರ್‌ ಬಾಯ್ ಮತ್ತೊಬ್ಬ ಒಳ್ಳೆ ಹುಡುಗ. ಇವರಿಬ್ಬರ ಕಾಂಬಿನೇಷನ್ ಯಾಕೋ ಏನೋ ವರ್ಕೌಟ್ ಅಗಿಲ್ಲ. ಮನೆಯಲ್ಲಿದ್ದಾಗಲೂ ಜಗಳ ಹೊರ ಬಂದ ಮೇಲೂ ಜಗಳ ಮುಂದುವರೆದಿದೆ.

ಇನ್ನು, ಯಾಕಪ್ಪಾ ಭುವನ್‌ಗೆ ಅರೆಸ್ಟ್ ವಾರೆಂಟ್ ಅಂತಾನಾ? ಬಿಗ್ ಬಾಸ್ ಸೀಸನ್-4 ನಲ್ಲಿ ಎಲ್ಲಾರಿಗಿಂತ ಹೆಚ್ಚು ಗಮನ ಸೆಳೆದದ್ದು ಪ್ರಥಮ್, ಭುವನ್ ಹಾಗೂ ಸಂಜನ ಕಾಂಬಿನೇಷನ್. ಸಂಜನಾ ವಿಚಾರಕ್ಕೆ ಇವರಿಬ್ಬರಿಗೂ ಹಲವಾರು ಬಾರಿ ಮಾತಿನ ಚಕಮಕಿ ನಡೆದಿದೆ. ಆದರೆ ಇದು ಅಲ್ಲಿಗೆ ನಿಂತಿಲ್ಲ . ಅವರು ಬಿಗ್ ಬಾಗ್ ಮನೆಯಿಂದ ಹೊರ ಬಂದ ಮೇಲೆ ಒಂದೇ ಧಾರಾವಾಹಿಯಲ್ಲಿ ನಟಿಸಿದ್ದು ಅಲ್ಲಿಯೂ ಕಿರಿಕ್ ಮಾಡಿಕೊಂಡಿದ್ದಾರೆ.

ಇಬ್ಬರ ಜಗಳ ಪೊಲೀಸ್ ಠಾಣೆ ಮೆಟ್ಟಲೇರಿದೆ. ಇದಕ್ಕೆ ಸಂಬಂಧಪಟ್ಟ ವಿಚಾರಣೆಗೆಂದು ಭುವನ್‌ಗೆ 15 ಬಾರಿ ನೋಟಿಸ್ ನೀಡಿದರೂ ಹಾಜರ್ ಆಗಲಿಲ್ಲ ಎಂಬ ಕಾರಣಕ್ಕೆ ಸೆಷನ್ಸ್ ಕೋರ್ಟ್ ನಿಂದ ಅರೆಸ್ಟ್ ವಾರೆಂಟ್ ಜಾರಿಯಾಗಿದೆ.

ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾದ ಭುವನ್‌ ನೋಟಿಸ್ ಗೆ ತಲೆಕೆಡಿಸಿಕೊಳ್ಳದ ಪರಿಣಾಮ ಈಗ ಬಂಧನ ಭೀತಿ ಎದುರಿಸುತ್ತಿದ್ದಾರೆ.