ಮಾನ್ವಿತ ಹರೀಶ್, ಕಾರುಣ್ಯರಾಮ್, ಕಾವ್ಯ ಶಾ, ಮಯೂರ್ ಪಟೇಲ್ ಈ ಬಾರಿಯ ಎಚ್ ಎಸ್‌ಆರ್ ಹಬ್ಬದ ಆಕರ್ಷಣೆಗಳು. ಕನ್ನಡ ಭಾಷೆಯ ಸೊಗಡು ತಿಳಿಸಲು ಎಚ್‌ಎಸ್‌ಆರ್ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಹಬ್ಬದ ಭಾಗವಾಗಿ ಡಿ.7ರಂದು ಡೊಳ್ಳು ಕುಣಿತದೊಂದಿಗೆ ಚಾಲನೆ ಸಿಗಲಿದ್ದು, ಮೊದಲ ದಿವಸ ಪೆಟ್ ಶೋ, ಬಾಡಿ ಬಿಲ್ಡರ್ಸ್‌ಗಳ ಪ್ರದರ್ಶನ, ಫ್ಲೂಟ್ ಬಾಕ್ಸಿಂಗ್, ಕಿರುಚಿತ್ರಗಳ ಸ್ಪರ್ಧೆ ನಡೆಯಲಿದೆ.

ಡಿ.8ರಂದು ಬೆಳಿಗ್ಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆ, ತರಕಾರಿ ಮಾರಾಟ, ತೆರೆದ ರಸ್ತೆಯಲ್ಲಿ ಆಹಾರ ಮಳಿಗೆಗಳು, ನೃತ್ಯ ಸ್ಪರ್ಧೆ, ಫ್ಯಾಶನ್ ಶೋ, ಸಂಗೀತದ ಅನಾವರಣಗೊಳ್ಳಲಿದೆ. ಡಿ.9ರಂದು ಆರೋಗ್ಯಕ್ಕಾಗಿ ಓಟ ನಡೆಯಲಿದೆ. ಐದು ಮಕ್ಕಳನ್ನು ದತ್ತು ತೆಗೆದುಕೊಂಡು ಅವರ ವಿದ್ಯಾಭ್ಯಾಸದ ಖರ್ಚನ್ನು ತಂಡ ಭರಿಸಲಿದೆ. ಮೂರು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮವನ್ನು ಅನುಶ್ರೀ ಮತ್ತು ನಿರಂಜನ್ ದೇಶಪಾಂಡೆ ಅವರು ನಡೆಸಿಕೊಡಲಿದ್ದಾರೆ.