ಬಾಹುಬಲಿ ಖ್ಯಾತಿಯ ನಟ ರಾಣಾ ದಗ್ಗುಬಾಟಿ ಕೆಲ ಸಮಯದಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮುಂಬೆಯ ಹಾಗೂ ಹೈದರಾಬಾದ್ ನಲ್ಲಿ ಚಿಕಿತ್ಸೆ ಪಡೆದರೂ ಗುಣಮುಖರಾಗದ ಕಾರಣ ಹೆಚ್ಚಿನ ಚಿಕಿತ್ಸೆಗೆ ಅಮೆರಿಕಾಗೆ ತೆರಳಿದ್ದಾರೆ. 

ಕಿಡ್ನಿ ಕಸಿ ಮಾಡಬೇಕಾ ಅಥವಾ ಬೇರೆ ಯಾವುದಾದರೂ ಟ್ರೀಟ್ ಮೆಂಟ್ ನಿಂದ ಗುಣಪಡಿಸಬಹುದಾ ಎಂದು ಅಲ್ಲಿನ ವೈದ್ಯರು ನಿರ್ಧರಿಸಲಿದ್ದಾರೆ. ರಾಣಾ ದಗ್ಗುಬಾಟಿ ತಾಯಿ ಕಿಡ್ನಿ ಕೊಡಲು ಮುಂದೆ ಬಂದಿದ್ದಾರೆ. 

ಇತ್ತೀಚಿಗೆ ರಾಣಾ ಹೌಸ್‌ಫುಲ್ 4, ವಿರಾಟಪರ್ವಂ, ಹಾತಿ ಮೇರೆ ಸಾತಿ, ಹಿರಣ್ಯಕಶ್ಯಪು ಸಿನಿಮಾಗಳಲ್ಲಿ ನಟಿಸಿದ್ದಾರೆ.